ಕೋಲ್ಕತ್ತಾ: ಸೇನಾ ಕಂಟೋನ್ಮೆಂಟ್‌ನಲ್ಲಿರುವ ಆಸ್ಪತ್ರೆಯ ವಾರ್ಡ್ ಆನೆಗಳು ನುಗ್ಗಿರುವ ಘಟನೆ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಸತಿ ಪ್ರದೇಶಕ್ಕೆ ಆನೆಗಳು ನುಗ್ಗಿದ ಹಿನ್ನೆಲೆ ಕೆಲಹೊತ್ತು ಅಲ್ಲಿನ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ವೀಡಿಯೋದಲ್ಲಿ ಜಲ್ಪೈಗುರಿ ಜಿಲ್ಲೆಯ ಸೇನಾ ಕಂಟೋನ್ಮೆಂಟ್‌ನಲ್ಲಿರುವ ಆಸ್ಪತ್ರೆಯಲ್ಲಿ ಆನೆಗಳು ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.
Advertisement
#WATCH : When Gajraj entered inside Binnaguri #IndianArmy hospital in #Bengal and then got confused as which human doctor chamber to knock, who to visit. ???? pic.twitter.com/MjYKEDh5pB
— Tamal Saha (@Tamal0401) September 5, 2022
Advertisement
ಕಟ್ಟಡದ ಒಳಗೆ ಆನೆಗಳು ಓಡಾಡುತ್ತಿರುವ ದೃಶ್ಯವನ್ನು ಜನರು ದೂರದಿಂದಲೇ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದು. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು
Advertisement
Elephants in the room…
From Jalpaiguri Cantonment. pic.twitter.com/ipbFR8bthG
— Susanta Nanda IFS (@susantananda3) September 4, 2022
Advertisement
ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು, ಕಾಡುಗಳನ್ನು ನಾಶಪಡಿಸಿದ ಹಿನ್ನೆಲೆ ಆನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಇದು ಅರಣ್ಯ ನಾಶದ ಫಲಿತಾಂಶ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: 255 ಕೋಟಿ ಡೀಲ್ – ಅಮೆರಿಕದ ಕಂಪನಿಯನ್ನು ಖರೀದಿಸಲಿದೆ ರಿಲಯನ್ಸ್
ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಒಂದು ಶ್ರೇಣಿಯನ್ನು ಪ್ರಚೋದಿಸಿತು, ಹೆಚ್ಚಾಗಿ ತಮಾಷೆಯಾಗಿದೆ. ಆದರೆ, ಆನೆಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುವುದು ಅರಣ್ಯನಾಶದ ಪರಿಣಾಮವಾಗಿದೆ ಎಂದು ಕೆಲವರು ತಿಳಿಸಿದರು. “ಅರಣ್ಯ ನಾಶ ಮತ್ತು ಅರಣ್ಯ ಮತ್ತು ಅವರ ಮನೆಗಳ ನಾಶದ ಫಲಿತಾಂಶ” ಎಂದು ಬಳಕೆದಾರರು ಬರೆದಿದ್ದಾರೆ.