ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ನಾಟಿ ಮಾಡಿದ್ದ ಭತ್ತದ ಗದ್ದೆಯಲ್ಲಿ ಓಡಾಡಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದೆ. ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಸಕಲೇಶಪುರ ತಾಲೂಕಿನ, ಕೀರಿಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ರತ್ನಮ್ಮ, ಮೋಹನ್, ಜಯರಾಜ್, ಮಂಜುನಾಥ್, ರಾಜು, ಸೋಮಶೇಖರ್, ಶ್ರೀನಿವಾಸ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ, ಬಾಳೆ, ಭತ್ತ, ಕಾಫಿ ಗಿಡಗಳನ್ನು ಕಾಡಾನೆಗಳ ಹಿಂಡು ತುಳಿದು ನಾಶ ಮಾಡಿವೆ. ಕಷ್ಟ ಪಟ್ಟು ನಾಲ್ಕೈದು ವರ್ಷಗಳಿಂದ ಬೆಳೆದಿದ್ದ ಅಡಿಕೆ, ಕಾಫಿ ಗಿಡಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಫ್ಲೆಕ್ಸ್‌ನಲ್ಲಿದ್ದ ಸಾವರ್ಕರ್ ಫೋಟೋ ಹರಿದುಹಾಕಿದ ಕಿಡಿಗೇಡಿಗಳು
Advertisement
Advertisement
ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲೂ ಓಡಾಡಿರುವ ಗಜಪಡೆ ಭತ್ತದ ಸಸಿಗಳನ್ನು ಸಂಪೂರ್ಣ ತುಳಿದು ಹಾಕಿವೆ. ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶದಿಂದ ಭಾರಿ ನಷ್ಟ ಉಂಟಾಗಿದ್ದು, ಬಡರೈತರು ಹಾಗೂ ಕಾಫಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಸಿಟಿ ರವಿ ಪತ್ರ
Advertisement
ಎರಡು ದಶಕಗಳಿಂದ ಜೀವಂತವಾಗಿರುವ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯದ ಸರ್ಕಾರ ಹಾಗೂ ಅರಣ್ಯಾಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೀರೆಹಳ್ಳಿ ಗ್ರಾಮದ ಸಮೀಪವೇ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ರೈತರು ಜೀವ ಭಯದಲ್ಲಿ ಗದ್ದೆ, ತೋಟಗಳಿಗೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
Live Tv
[brid partner=56869869 player=32851 video=960834 autoplay=true]