ಮಡಿಕೇರಿ: ಮನೆಗೆ ನಾಯಿ, ಚಿರತೆ ನುಗ್ಗಿರೋದನ್ನು ಸಾಮಾನ್ಯವಾಗಿ ನೋಡಿರುತ್ತೇವೆ, ಕೇಳಿರುತ್ತೇವೆ ಆದರೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದಲ್ಲಿ ಕಾಡಾನೆಯೊಂದು ಮನೆಗೆ ನುಗ್ಗುಲು ಯತ್ನಿಸಿದೆ. ಇದೀಗ ಈ ದೃಶ್ಯ ವೈರಲ್ ಆಗಿದೆ.
Advertisement
ಕೊಡಗು ಜಿಲ್ಲೆಯಲ್ಲಿ ಅನೆ ಮತ್ತು ಮಾನವನ ಸಂಘರ್ಷಗಳು ಅಗುತ್ತಿರುವುದು ಸಮಾನ್ಯವಾಗಿದೆ. ಅಷ್ಟೇ ಅಲ್ಲದೇ ಕಾಡಾನೆಗಳು ತೋಟ, ಗದ್ದೆಗಳಿಗೆ ನುಗ್ಗಿ ಬೆಳೆಹಾನಿ ಮಾಡಿ ಊರಿಗೆ ನುಗ್ಗಿ ದಾಂಧಲೆ ಸೃಷ್ಟಿ ಮಾಡುತ್ತಿದ್ದವು. ಇದೀಗ ಗ್ರಾಮೀಣ ಪ್ರದೇಶದಲ್ಲಿ ಇರುವ ಮನೆಗೆ ನುಗ್ಗಲು ಕಾಡಾನೆಯೊಂದು ಯತ್ನಿಸಿದ್ದು, ಮನೆ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್
Advertisement
Advertisement
ಪೊನ್ನಂಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದ ಸೋಮಯ್ಯ ಎಂಬುವರ ಮನೆಗೆ ಕಾಡಾನೆ ಮನೆಗೆ ನುಗ್ಗಲು ಯತ್ನಿಸಿದೆ. ಮನೆಯ ಹಿಂಬದಿ ಬಾಗಿಲನ್ನು ಎರಡೆರಡು ಬಾರಿ ತಳ್ಳಲು ವಿಫಲಯತ್ನ ಮಾಡಿದ ಕಾಡಾನೆ, ಒಮ್ಮೆ ಮನೆ ಬಾಗಿಲು ನೂಕಿ ಅತ್ತ ಹೋಗಿ ಮತ್ತೆ ತಿರುಗಿ ಬಂದು ಮನೆಗೆ ನುಗ್ಗಲು ಯತ್ನ ನಡೆಸಿದೆ. ಅದರೆ ಬಾಗಿಲು ಒಪನ್ ಅಗದೇ ಇದ್ದುದರಿಂದಾಗಿ ಕಾಡಾನೆ ಜಾಗ ಖಾಲಿಮಾಡಿದೆ. ಕಾಡಾನೆ ಮನೆಗೆ ನುಗ್ಗಲು ಯತ್ನಿಸಿರುವ ದೃಶ್ಯ ಪಕ್ಕದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗುತ್ತಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪ – ಚರ್ಚೆಗೆ ಆಗ್ರಹಿಸಿ ಸಾರಾ ಮಹೇಶ್ ಪ್ರತಿಭಟನೆ
Advertisement