ನವದೆಹಲಿ: ಆನೆಯೊಂದು ಬೋರ್ ವೆಲ್‍ನಿಂದ ತನಗೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಸೇದಿಕೊಂಡು ಕುಡಿದಿರುವ ಅಪರೂಪದ ವೀಡಿಯೋ ಇದೀಗ ವೈರಲ್ ಆಗಿದೆ.
एक हाथी भी #जल की एक-एक #बूंद का महत्व समझता है। फिर हम इंसान क्यों इस अनमोल रत्न को व्यर्थ करते हैं?
आइए, आज इस जानवर से सीख लें और #जल_संरक्षण करें। pic.twitter.com/EhmSLyhtOI
— Ministry of Jal Shakti ???????? #AmritMahotsav (@MoJSDoWRRDGR) September 3, 2021
Advertisement
ಜಲ ಶಕ್ತಿ ಸಚಿವಾಲಯ ಈ ವೀಡಿಯೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಬೋರ್‍ವೆಲ್ ಮುಂದೆ ಆನೆಯೊಂದು ತಾನೇ ನೀರು ಸೇದಿಕೊಂಡು ಕುಡಿಯುತ್ತಿದೆ. 26 ಸೆಕೆಂಡ್‍ನ ಈ ವೀಡಿಯೋದಲ್ಲಿ ಆನೆ ತನಗೆ ಬೇಕಾಗುಷ್ಟು ನೀರನ್ನು ಆನೆ ಪಂಪ್ ಮಾಡಿಕೊಳ್ಳುತ್ತದೆ. ಬಳಿಕ ಕೆಳಗಿರುವ ನೀರನ್ನು ಕುಡಿಯುತ್ತದೆ.
Advertisement
ನೀರು ಕೆಳಗೆ ಬೀಳುತ್ತಿದ್ದಂತೆ ಆನೆ ನೀರು ಕುಡಿದು ದಣಿವಾರಿಸಿಕೊಳ್ಳತ್ತದೆ. ಈ ವೀಡಿಯೋ ನೋಡಿದ ಹಲವರು ವಿವಿಧ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ನೀರಿನ ಮಹತ್ವವನ್ನು ಆನೆ ಸಹ ತಿಳಿದಿದೆ. ಆದರೆ ಮನುಷ್ಯರು ನೈಸರ್ಗಿಕ ಸಂಪತ್ತಿನ ಕುರಿತು ಏಕೆ ಅರಿತಿಲ್ಲ? ನೀರನ್ನು ಉಳಿಸುವ ಕುರಿತು ನಾವು ಆನೆಯಿಂದ ಪಾಠ ಕಲಿಯಬೇಕಿದೆ ಎಂದು ಜಲ ಶಕ್ತಿ ಟ್ವಿಟ್ಟರ್ ನಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?
Advertisement
Advertisement
ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 17 ಸಾವಿರ ಬಾರಿ ವೀಕ್ಷಣೆಗೊಳಪಟ್ಟಿದೆ. ಭಾರತೀಯ ಅರಣ್ಯ ಇಲಾಖೆಯ ರಮೇಶ್ ಪಾಂಡೆ ಸಹ ವೀಡಿಯೋ ಶೇರ್ ಮಾಡಿದ್ದಾರೆ. ನೀರು ಹಾಗೂ ಪ್ರಾಣಿಗಳು ಎರಡೂ ಬೆಲೆಬಾಳುವಂತಹವು. ಅವುಗಳ ಉಳಿವಿಗಾಗೀ ನಾವು ರಕ್ಷಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.