ಚಾಮರಾಜನಗರ: ಬಂಡೀಪುರ ಅರಣ್ಯದಂಚಿನಲ್ಲಿ ಕಾಡಾನೆ (Elephant) ಪುಂಡಾಟ ಜೋರಾಗಿದೆ. ಪುಂಡಾನೆ ಸೆರೆಗೆ ಸಾಕಾನೆಗಳ ಕಾರ್ಯಾಚರಣೆ ಇದೀಗ ಆರಂಭಿಸಲಾಗಿದೆ.
ಗುಂಡ್ಲುಪೇಟೆ ತಾಲೂಕು ಹುಂಡೀಪುರ, ಮಂಗಲ, ಜಕ್ಕಳ್ಳಿ, ಎಲಚೆಟ್ಟಿ ಸೇರಿದಂತೆ ಹಲವೆಡೆ ಕಾಡಾನೆ ಉಪಟಳ ಹೆಚ್ಚಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ ಮೂರು ರಾಜ್ಯಗಳಲ್ಲಿಯೂ ಆನೆಗಳು ಸಂಚರಿಸಿ ಬೆಳೆ ನಾಶ, ಸೋಲಾರ್ ಬೇಲಿ ತಂತಿ ತುಳಿದು ಹಾನಿ ಮಾಡಿವೆ. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಒಂಟಿ ಸಲಗ ಅಕ್ಕಿ, ಬೆಲ್ಲ ತರಕಾರಿ ಕದ್ದು ಮೇಯುತ್ತಿದೆ.
Advertisement
Advertisement
ಕಳೆದ 5 ತಿಂಗಳಿಂದ ನಿರಂತರವಾಗಿ ಉಪಟಳ ನೀಡುತ್ತಿರುವ ಒಂಟಿ ಆನೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. 5 ಸಾಕಾನೆಗಳಿಂದ ಪುಂಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ದುಬಾರೆ, ರಾಮಾಪುರ ಬಿಳಿಗಿರಿರಂಗನ ಬೆಟ್ಟದಿಂದ ಸಾಕಾನೆಗಳನ್ನು ಕರೆತರಲಾಗಿದೆ. ಇದನ್ನೂ ಓದಿ: ರಿಮ್ಸ್ ಆಸ್ಪತ್ರೆಯಲ್ಲಿ ಮಂಗಗಳ ಕಾಟ – ಹೈರಾಣಾದ ಒಳರೋಗಿಗಳು
Advertisement
Advertisement
ಈಗಾಗಲೇ ಡ್ರೋನ್ ಕಾರ್ಯಾಚರಣೆ ಮೂಲಕ ಪುಂಡಾನೆ ಪತ್ತೆಹಚ್ಚಲಾಗಿದೆ. ಎಲಚೆಟ್ಟಿ ಬಳಿ ಒಂಟಿ ಸಲಗದ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಅರಣ್ಯ ಸಿಬ್ಬಂದಿ ಪುಂಡಾನೆ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: 50 ಅಡಿ ಬ್ರಿಡ್ಜ್ ಮೇಲಿಂದ ಉರುಳಿ ಬಿದ್ದ ಕ್ಯಾಂಟರ್ – ಪವಾಡಸದೃಶವಾಗಿ ಬದುಕುಳಿದ ಚಾಲಕ