ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಅಭಯಾರಣ್ಯದ (Bhadra Reserve Forest) ವ್ಯಾಪ್ತಿಯಲ್ಲಿ ಆನೆಯ ಕಳೆಬರ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಭದ್ರಾ ಅಭಯಾರಣ್ಯದ ಹುಲಿ ಮೀಸಲು ಅರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದ ಅಲ್ದಾರ ಸಮೀಪದ ಬೈರಾಪುರ ಹಿನ್ನೀರಿನ ದಟ್ಟಅರಣ್ಯ ಪ್ರದೇಶದಲ್ಲಿ ಆನೆಯ ಕಳೆಬರಹ ಪತ್ತೆಯಾಗಿದೆ. ಆನೆ ಮೃತಪಟ್ಟು ಸುಮಾರು ಒಂದು ತಿಂಗಳು ಕಳೆದಿದೆ. ಆನೆಯ (Elephant) ಅಸ್ತಿ ಪಂಜರ ಸ್ಥಳೀಯ ಮೀನುಗಾರಿಗೆ ಕಂಡು ಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ (Forest Department) ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಫ್ರಿಕಾದ ಮಹಿಳೆಗೆ ಏಕಕಾಲದಲ್ಲೇ ಎರಡು ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗ್ಳೂರು ವೈದ್ಯರು
Advertisement
Advertisement
ಆನೆ ಹಣೆಯ ಭಾಗಕ್ಕೆ ಗುಂಡು ಹೊಡೆದಿರುವ ಗುರುತು ಪತ್ತೆಯಾಗಿದೆ. ಆನೆ ಹಣೆಯ ಮಧ್ಯ ಭಾಗದಲ್ಲಿ ಸುಮಾರು ಎರಡು ಇಂಚು ಅಗಲದ ಗುಂಡಿನ ರಂಧ್ರ ಎದ್ದು ಕಾಣುತ್ತಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆನೆ ದಂತಕ್ಕಾಗಿ ದಂತಚೋರರ ಗ್ಯಾಂಗ್ ಭದ್ರಾ ಅಭಯಾರಣ್ಯ ಭಾಗದಲ್ಲಿ ಸಕ್ರಿಯವಾಗಿದ್ಯಾ? ಎಂಬ ಪ್ರಶ್ನೆ ಮೂಡಿದೆ. ಈ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯ ಕಳೆಬರವನ್ನ ಸರಿಯಾಗಿ ತಪಾಸಣಾ ಮಾಡಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಜಿತಿಯಾ ಪವಿತ್ರ ಸ್ನಾನದ ವೇಳೆ ಅವಘಡ – ಬಿಹಾರದಲ್ಲಿ 37 ಮಕ್ಕಳು ಸೇರಿ 46 ಮಂದಿ ನದಿಯಲ್ಲಿ ಮುಳುಗಿ ದುರ್ಮರಣ
Advertisement
Advertisement
ಆನೆಯನ್ನು ದಂತಕ್ಕಾಗಿ ಹತ್ಯೆ ಮಾಡಿರುವ ಅನುಮಾನ ಸ್ಥಳೀಯರನ್ನ ಕಾಡುತ್ತಿದೆ. ಏಕೆಂದರೆ ಆನೆ ಸತ್ತ ಜಾಗದಲ್ಲಿ ಆನೆಯ ಯಾವುದೇ ದಂತಗಳು ಕಂಡು ಬಂದಿಲ್ಲ. ಅಲ್ಲದೇ ರಾತ್ರಿ ವೇಳೆ ಭದ್ರಾ ಹಿನ್ನೀರಿನಲ್ಲಿ ಬೋಟ್‌ಗಳ ಮೂಲಕ ಅಭಯಾರಣ್ಯಕ್ಕೆ ಕಳ್ಳಸಾಗಣೆ ಮಾಡಲು ಕಾಡ್ಗಳ್ಳರು ಬರುವುದು ಹೆಚ್ಚಾಗಿದೆ ಎಂಬ ಆರೋಪವೂ ಬಲವಾಗಿದೆ. ಇದನ್ನೂ ಓದಿ: Badlapur Encounter | ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ?: ದೇವೇಂದ್ರ ಫಡ್ನವೀಸ್
ಭದ್ರಾ ಹಿನ್ನೀರಿನಲ್ಲಿ ಆನೆಗಳ ಹಿಂಡು ವ್ಯಾಪಕವಾಗಿವೆ. ಆನೆ ದಂತಕ್ಕೆ ಭಾರಿ ಬೇಡಿಕೆ ಇದ್ದು ಕಳೆದ ವರ್ಷ ಕೂಡ ಮುತ್ತೋಡಿ ಅರಣ್ಯದ ಜಾಗರ ಗ್ರಾಮದ ಸಮೀಪ ಆನೆ ಕೊಂದು ದಂತ ಅಪಹರಿಸಲಾಗಿತ್ತು. ಆನೆ ಸತ್ತು ತಿಂಗಳಾದರೂ ಅರಣ್ಯ ವ್ಯಾಪ್ತಿಯಲ್ಲಿ ಗಸ್ತುತಿರುಗುವ ಅಧಿಕಾರಿಗಳಿಗೂ ಗೊತ್ತಾಗಲಿಲ್ಲ ಪ್ರಶ್ನೆ ಎಲ್ಲರನ್ನ ಕಾಡತೊಡಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನೆಗಳ ಮೇಲಿನ ದಾಳಿ ಮುಂದುವರಿದಿದೆ. ಹಿರಿಯ ಅರಣ್ಯಾಧಿಕಾರಿಗಳು ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಪರಿಸರವಾದಿಗಳು ಹಾಗೂ ಸ್ಥಳಿಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಅರುಣಾಚಲ ಪ್ರದೇಶದ ಹಾಸ್ಟೆಲ್ ವಾರ್ಡನ್‌ಗೆ ಗಲ್ಲು ಶಿಕ್ಷೆ