ಚಾಮರಾಜನಗರ: ಆಹಾರ ಅರಸಿ ರಸ್ತೆಗೆ ಅಡ್ಡಲಾಗಿ ನಿಂತಿದ್ದ ಕಾಡಾನೆ ತರಕಾರಿ-ಕಬ್ಬಿನ ಆಸೆಗಾಗಿ ಲಾರಿ ಸರ್ಚ್ ಮಾಡಿರುವ ಘಟನೆ ನಡೆದಿದೆ.
ಚಾಮರಾಜನಗರ ಗಡಿ ತಮಿಳುನಾಡಿನ ದಿಂಬಂ ಬಣ್ಣಾರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಹಾರ ಅರಸಿ ಕಾಡಾನೆ ರಸ್ತೆಯಲ್ಲಿ ನಿಂತು ಸಂಚರಿಸುವ ವಾಹನಗಳನ್ನು ಸರ್ಚ್ ಮಾಡಿದೆ. ತಿನ್ನೋಕೆ ಕಬ್ಬು ಸಿಗಬಹುದಾ ಅಂತ ಲಾರಿಯನ್ನು ಚೆಕ್ ಮಾಡಿದೆ.
ಒಂದಷ್ಟು ದಿನದಿಂದ ಕಾಡಾನೆ ಭಯವಿಲ್ಲದೆ ವಾಹನಗಳು ಸಂಚಾರ ಮಾಡಿದ್ದರು. ಇದೀಗ ಕಬ್ಬು, ತರಕಾರಿ ಆಸೆಗೆ ಮತ್ತೇ ಕಾಡಾನೆ ಎಂಟ್ರಿ ಕೊಟ್ಟಿವೆ. ಆನೆ ರಸ್ತೆಯಲ್ಲಿ ನಿಂತಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

