ಮಡಿಕೇರಿ: ಕೊಡಗಿನ ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆ ಶಿಬಿರದಲ್ಲಿ ಇದ್ದಂತಹ ಕುಶ ಎಂಬ ಆನೆ ಕಳೆದ ನಾಲ್ಕು ಐದು ದಿನಗಳಿಂದ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ಈ ಆನೆಯನ್ನು ಮೇಯಲು ಕಾಡಿಗೆ ಬಿಟ್ಟಂತಹ ಸಂದರ್ಭದಲ್ಲಿ ಶಿಬಿರಕ್ಕೆ ಮರಳದೇ ತಪ್ಪಿಸಿಕೊಂಡಿದೆ ಎನ್ನಲಾಗಿದೆ. ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ಕಾವಾಡಿಗಳು ದುಬಾರೆಯ ಅರಣ್ಯದೊಳಗೆಲ್ಲ ಸುತ್ತಾಡಿ ಹುಡುಕಾಟ ನಡೆಸಿದರೂ ಕುಶ ಪತ್ತೆಯಾಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ವೀರಾಜಪೇಟೆಯ ಬೀಟೆಕಾಡು ಎಸ್ಟೇಟ್‍ನಿಂದ ಎರಡು ಆನೆಗಳನ್ನು ಸೆರೆಹಿಡಿಯಲಾಗಿತ್ತು. ದುಬಾರೆ ಶಿಬಿರದಲ್ಲಿ ಪಳಗಿಸಿದ ಇವುಗಳಿಗೆ ಒಂದಕ್ಕೆ ಲವ ಎಂದು ಮತ್ತೊಂದಕ್ಕೆ ಕುಶ ಎಂದು ನಾಮಕರಣ ಮಾಡಲಾಗಿತ್ತು.
Advertisement
Advertisement
ಲವ ಆನೆ ಶಿಬಿರದಲ್ಲೇ ಇದೆ, ಆದರೆ ಅಂದಾಜು 28ರ ಪ್ರಾಯದ ಕುಶ ಆನೆ ನಾಪತ್ತೆಯಾಗಿ ಅರಣ್ಯಾಧಿಕಾರಿಗಳ ನಿದ್ದೆ ಕೆಡಿಸಿದೆ. ದುಬಾರೆಯ ಸಾಕಾನೆ ಶಿಬಿರದ ಮೇಲ್ವಿಚಾರಕ ಉಪವಲಯ ಅರಣ್ಯಾಧಿಕಾರಿ ಹಗಲು, ರಾತ್ರಿ ಕುಶನ ಶೋಧದಲ್ಲಿ ತೊಡಗಿದ್ದಾರೆ.