ಚಾಮರಾಜನಗರ: ಕಾಡಾನೆ ಬಿಡಿ ಕೆಲವೊಮ್ಮೆ ಸಾಕಾನೆಗಳೇ ತಮ್ಮ ಹತ್ತಿರ ಹೋದವರನ್ನು ತುಳಿದು ಬಿಸಾಡುತ್ತದೆ. ಆದರೆ ಇಲ್ಲೊಬ್ಬ ಭೂಪ ಒಂಟಿ ಸಲಗಕ್ಕೆ ಅಡ್ಡಬಿದ್ದು ಠಕ್ಕರ್ ಕೊಟ್ಟು ಎಲ್ಲರ ಹುಬ್ಬೇರಿಸಿದ್ದಾನೆ.
ಹೌದು, ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಒಂಟಿ ಸಲಗಕ್ಕೆ ನಮಸ್ಕರಿಸಲು ಹೋಗಿದ್ದಾನೆ. ಅಡ್ಡ ಬೀಳುವುದನ್ನು ಕಂಡ ಆನೆ ಗಲಿಬಿಲಿಗೊಂಡು ಕಾಡಿನೊಳಕ್ಕೆ ಹೋಗಿರುವ ಘಟನೆ ಚಾಮರಾಜನಗರದ ಗಡಿ ಕಾರೆಪಾಳ್ಯ ಸಮೀಪ ನಡೆದಿದೆ.
Advertisement
ರಾತ್ರಿ ಸಂಚಾರ ನಿಬರ್ಂಧದಿಂದ ಟ್ರಾಫಿಕ್ ಜಾಂ ಉಂಟಾಗಿ ಎಲ್ಲಾ ಲಾರಿಗಳು ಸಾಲಾಗಿ ನಿಲ್ಲಿಸಿಕೊಂಡಿದ್ದ ವೇಳೆ ಎಂದಿನಂತೆ ಕಬ್ಬಿನ ಲಾರಿಗಾಗಿ ಆನೆಯೊಂದು ರಸ್ತೆ ಬದಿ ಬಂದಿತ್ತು. ಈ ವೇಳೆ ದಿಢೀರನೇ ಎಂಟ್ರಿ ಕೊಟ್ಟ ವ್ಯಕ್ತಿಯೊಬ್ಬ ಆನೆ ಬಳಿ ಹೋಗಿ ಕೈ ಮುಗಿದು ಅಡ್ಡ ಬಿದ್ದಿದ್ದಾನೆ. ಇದನ್ನೂ ಓದಿ: ಮಾನವೀಯತೆ ಮರೆತ ಅಥಣಿ ಪುರಸಭೆ ಅಧಿಕಾರಿಗಳು
Advertisement
Advertisement
ಆನೆ ಒಮ್ಮೆ ಕೂಗಿ ಕೋಪ ತೋರಿಸಿದರೂ ಬಿಡದ ಈತ ಆನೆಯನ್ನು ಹಿಂಬಾಲಿಸಿ ಮತ್ತೊಮ್ಮೆ ಕಾಲಿಗೆ ಬಿದ್ದಿದ್ದಾನೆ. ಆನೆ ದಾಳಿ ಮಾಡಲು ಮುಂದಾದರೂ ಚಲಿಸದೇ ನಿಂತಿದ್ದ ಈತನ ವರ್ತನೆಯಿಂದ ಗಲಿಬಿಲಿಗೊಂಡ ಸಲಗ ಕಾಡಿನತ್ತ ಓಡಿ ಹೋಗಿದೆ. ಇದನ್ನೂ ಓದಿ: ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್
Advertisement
ಲಾರಿ ಚಾಲಕರು ಈ ವೀಡಿಯೋ ಸೆರೆ ಹಿಡಿದಿದ್ದು ಆನೆ ಬಳಿ ಹೋಗದಂತೆ ಸಾಕಷ್ಟು ಬಾರಿ ಕೂಗಿ ಕರೆಯುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.