ಮಡಿಕೇರಿ: ಸಾಕಾನೆ ಕುಶ 4 ಸಾವಿರ ಕಿ.ಮೀ ಕಾಡಿನಲ್ಲಿ ಸಂಚರಿಸಿ ಮರಳಿ ತನ್ನ ಗೂಡಿಗೆ ನಡೆದುಕೊಂಡು ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿರುವ ಘಟನೆ ಕೊಡಗಿನ ದುಬಾರೆಯಲ್ಲಿ ನಡೆದಿದೆ.
Advertisement
ಸಾಕಾನೆ ಕುಶನನ್ನು ತಾನು ಹುಟ್ಟಿ ಬೆಳೆದ ಊರಿನಿಂದ ಮೇಲಧಿಕಾರಿಗಳ ಸೂಚನೆ ಮೇರೆಗೆ ನೂರಾರು ಕಿಲೋಮೀಟರ್‌ನಷ್ಟು ದೂರ ಹೋಗಿ ಅರಣ್ಯ ಇಲಾಖೆಯ ಸಿಬ್ಬಂದಿ ಬಿಟ್ಟು ಬಂದಿದ್ರು. ಆದರೆ ಆ ಆನೆ ಬಂದು ಒಂದು ವರ್ಷ ಏಳು ದಿನಗಳಲ್ಲಿ ತಾನು ಹುಟ್ಟಿ ಬೆಳೆದ ಸಂಗತಿಗಳನ್ನು ನೆನಪು ಮಾಡಿಕೊಂಡು ಸಾವಿರಾರು ಕಿ.ಮೀ ನಡೆದುಕೊಂಡು ಬಂದು ಮತ್ತೆ ತಾನು ಇದ್ದ ಸ್ಥಳಕ್ಕೆ ತಲುಪಿದೆ. ಇದರಿಂದಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮಾವುತ ಕಾವಾಡಿಗರಿಗೆ ಆಶ್ಚರ್ಯ ಉಂಟು ಮಾಡಿದೆ. ಇದನ್ನೂ ಓದಿ: ಪೊಲೀಸ್ ಇಲಾಖೆ ಸಿಬ್ಬಂದಿ ವಿರುದ್ಧ ಪೋಸ್ಟ್ – ಕಾನ್ಸ್‌ಟೇಬಲ್ ಅಮಾನತು
Advertisement
Advertisement
2021 ಜೂನ್ ತಿಂಗಳಲ್ಲಿ ದುಬಾರೆ ಸಾಕಾನೆ ಶಿಬಿರದಿಂದ ಬಂಡೀಪುರಕ್ಕೆ ಸ್ಥಳಾಂತರ ಮಾಡಿದ ಸಾಕನೆ ಮತ್ತೆ ಪ್ರತ್ಯಕ್ಷವಾಗಿದೆ. ಬಂಡೀಪುರದಿಂದ ದುಬಾರೆ ಕುಶಾ ಶಿಬಿರಕ್ಕೆ 4 ಸಾವಿರ ಕಿಲೋ ಮೀಟರ್ ಕ್ರಮಿಸಿ ಮರಳಿದೆ. ಕುಶಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿದ ಹಿನ್ನೆಲೆಯಲ್ಲಿ ಅದರ ಚಲನವಲನ ಪತ್ತೆಯಾಗಿದೆ.
Advertisement
ವರ್ಷದ ಹಿಂದೆ ಕೆಲವು ವನ್ಯಜೀವಿ ಪ್ರೇಮಿಗಳ ಒತ್ತಾಯದಿಂದ ರಾಜ್ಯ ಸರ್ಕಾರ ಕುಶ ಎಂಬ ಆನೆಯನ್ನು ಅರಣ್ಯ ಇಲಾಖೆ ಮೂಲಕ ರೇಡಿಯೋ ಕಾಲರ್ ಅಳವಡಿಸಿ 2021 ಜೂನ್ ತಿಂಗಳಲ್ಲಿ ಬಂಡೀಪುರಕ್ಕೆ ಸ್ಥಳಾಂತರ ಮಾಡುವ ಕಾರ್ಯ ನಡೆಸಿತ್ತು. ಆದರೆ ಬಂಡೀಪುರದಲ್ಲಿ ನೆಲೆ ನಿಲ್ಲಲು ಇಚ್ಛಿಸದ ಕುಶ ಅಲ್ಲಿನ ಕೆಲವು ಸಂಗಡಿಗರೊಂದಿಗೆ ಕೇರಳ ಮೂಲಕ ಕೊಡಗಿನ ಗಡಿ ದಾಟಿ, ತಿತಿಮತಿ ದೊಡ್ಡಹರವೆ ಮೀಸಲು ಅರಣ್ಯ ಮಾರ್ಗವಾಗಿ ಇದೀಗ ಮಾಲ್ದಾರೆ ಸಮೀಪದ ದುಬಾರೆ ಶಿಬಿರದ ಸಮೀಪದಲ್ಲಿ ನೆಲೆಯೂರಿದೆ.
ಕುಶ ಶಿಬಿರದಲ್ಲಿದ್ದ ಸಂದರ್ಭ ಅಧಿಕಾರಿಗಳು ಮತ್ತು ಮಾವುತರು ತುಂಬಾ ಚೆನ್ನಾಗಿ ಆರೈಕೆ ಮಾಡಿದ ಹಿನ್ನೆಲೆಯಲ್ಲಿ ಅದನ್ನು ನೆನಪಿಸಿಕೊಂಡು ಶಿಬಿರಕ್ಕೆ ಮತ್ತೆ ಹಿಂತಿರುಗುವ ಮನಸ್ಸು ಮಾಡಿದೆ ಅನ್ನೋದು ಕೆಲವರ ಅಭಿಪ್ರಾಯ. 2016ರಲ್ಲಿ ಜಿಲ್ಲೆಯ ಚೆಟ್ಟಳ್ಳಿ ಅರಣ್ಯದಿಂದ ಹಿಡಿದು ಶಿಬಿರಕ್ಕೆ ತಂದ ಕುಶ ದುಬಾರೆ ಸಾಕಾನೆ ಶಿಬಿರ ಸೇರಿತ್ತು. 2017 ರ ನವೆಂಬರ್ ತಿಂಗಳಲ್ಲಿ ಏಕಾಏಕಿ ಕುಶಾ ಶಿಬಿರದಿಂದ ನಾಪತ್ತೆಯಾಗಿತ್ತು. ನಂತರ ಆನೆಯನ್ನು ಮರಳಿ ತರುವಲ್ಲಿ ದುಬಾರೆ ಸಾಕಾನೆ ಶಿಬಿರದ ಅಧಿಕಾರಿಗಳು ಸಿಬ್ಬಂದಿ ಹರಸಾಹಸಪಟ್ಟು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ವನ್ಯಜೀವಿ ಪ್ರೇಮಿ ಮನೇಕಾ ಗಾಂಧಿ ನೇತೃತ್ವದ ತಂಡದ ಆಗ್ರಹದಂತೆ ಸರ್ಕಾರ ಕುಶ ಆನೆಯನ್ನು ಅದರ ಇಚ್ಛೆಗೆ ವಿರುದ್ಧವಾಗಿ ಮತ್ತೆ ಅರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಸಿತ್ತು. ಆದರೆ ಅಂದು ಕುಶ ಅನೆ ವಲ್ಲದ ಮನಸ್ಸಿನಲ್ಲೇ ಬಂಡಿಪುರ ಅರಣ್ಯದಲ್ಲೇ ಸುತ್ತಾಡಿಕೊಂಡು ಇತ್ತು. ಇದನ್ನೂ ಓದಿ: ಸಾಂಪ್ರದಾಯಿಕ ಒತ್ತು ಶಾವಿಗೆ, ಕಾಯಿ ಹಾಲು ಮಾಡುವ ವಿಧಾನ
ಒಟ್ಟಿನಲ್ಲಿ ಬಂಡೀಪುರದಿಂದ ನೂರಾರು ಕಿಲೋ ಮೀಟರ್ ದೂರದ ದುಬಾರೆಗೆ ಮತ್ತೆ ಆಗಮಿಸಿದ ಕುಶ ಇದೀಗ ಶಿಬಿರದ ಕೆಲವೇ ಅಂತರದಲ್ಲಿ 5-6 ಕಾಡಾನೆಗಳ ಜೊತೆಗೆ ಓಡಾಡುತ್ತಿದೆ. ತಾನು ಹುಟ್ಟಿ ಬೆಳೆದ ಸ್ಥಳಕ್ಕೆ ಸಾವಿರಾರು ಕಿಲೋ ಮೀಟರ್ ನಡೆದು ಬಂದಿರುವುದು ನಿಜಕ್ಕೂ ಆಶ್ಚರ್ಯ. ಮೂಕಪ್ರಾಣಿಯೊಂದರ ಪ್ರೀತಿ ಹೇಗೆ ಇದೆ ಎಂದು ಸಾಕಾನೆಯನ್ನು ಪಳಗಿಸಿದ ಮಾವುತ ಕಾವಡಿಗಳ ಮಾತಾಗಿದೆ.