ತುಮಕೂರು: ಮನುಷ್ಯರನ್ನು ಅಪಹರಣ ಮಾಡಿದ್ದು ನೋಡಿದ್ವಿ, ಚಿಕ್ಕಪುಟ್ಟ ವಸ್ತುಗಳನ್ನು ಕಳ್ಳತನ ಮಾಡಿದ್ದು ಕಂಡಿದ್ವಿ. ಆದರೆ ಪ್ರಾಣಿಗಳನ್ನೇ ಅಪಹರಣ ಮಾಡ್ತಾರೆ ಅಂದ್ರೆ ಹೇಗೆ..? ಅದೂ ನಾಯಿ, ಬೆಕ್ಕಲ್ಲ ಬದಲಾಗಿ ಮಠದ ಆನೆ.
Advertisement
ಹೌದು, ತುಮಕೂರು ನಗರದ ಹೊರಪೇಟೆಯಲ್ಲಿರುವ ಕರಿಬಸವಸ್ವಾಮಿ ಮಠದ ಆನೆಯನ್ನು ಶುಕ್ರವಾರ ಅಪಹರಣ ಮಾಡಲಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಆನೆಗೆ ಬನ್ನೇರಘಟ್ಟದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಲಾರಿಯಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ದಾಬಾಸ್‍ಪೇಟೆ ಬಳಿ ಮಾವುತರ ಮೇಲೆ ಹಲ್ಲೆ ಮಾಡಿ ಆನೆಯನ್ನು ಅಪಹರಣ ಮಾಡಿದ್ದಾರೆ. ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ
Advertisement
Advertisement
ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗುವ ಬದಲು ಕುಣಿಗಲ್ ನ ಹಳ್ಳಿಯೊಂದರಲ್ಲಿ ಆನೆಯನ್ನು ಬಚ್ಚಿಡಲಾಗಿತ್ತು. ಈ ವೇಳೆ ಆನೆಗೂ ಜೆಸಿಬಿಯಿಂದ ಹಲ್ಲೆ ಮಾಡಲಾಗಿತ್ತು ಅನ್ನೋದು ಮಠದ ಸಿಬ್ಬಂದಿ ಆರೋಪ. ಮಾವುತರ ಮಾಹಿತಿ ಮೇರೆಗೆ. ಅಖಾಡಕ್ಕಿಳಿದಿದ್ದ ಪೊಲೀಸರು ಆನೆಯನ್ನು ಪತ್ತೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಗುಜರಾತಿನ ಸರ್ಕಸ್ ಕಂಪನಿಯ ಆಮಿಷಕ್ಕೆ ಒಳಗಾಗಿ ಆನೆಯನ್ನು ಕದ್ದೊಯ್ದಿದ್ದಾರೆಂದು ಕರಿಬಸವಸ್ವಾಮಿ ಮಠದ ಶ್ರೀಗಳು ಆರೋಪಿಸಿದ್ದಾರೆ.