ಚಾಮರಾಜನಗರ: ಏಕಾಏಕಿ ಕಾಡು ಹಾದಿಯಲ್ಲಿ ಮರಿ ಆನೆಗಳೊಂದಿಗೆ ಪ್ರತ್ಯಕ್ಷವಾದ ಆನೆಗಳ ಗುಂಪೊಂದು ಒಂದು ಗಂಟೆ ಸಫಾರಿ ಜೀಪನ್ನು ಅಡ್ಡಹಾಕಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿ ವಲಯದಲ್ಲಿ ನಡೆದಿದೆ.
Advertisement
ಸಫಾರಿಯಲ್ಲಿ “ಸುತ್ತುರೋಡ್” ಎಂಬ ಸಫಾರಿ ವಲಯದಲ್ಲಿ ಪ್ರವಾಸಿಗರಿದ್ದ ಜೀಪನ್ನು ಎರಡು ಮರಿಗಳೊಂದಿಗೆ ಮೂರು ಆನೆಗಳು ದಾರಿ ಕೊಡದೇ ಅಡ್ಡಹಾಕಿದೆ. ಸಫಾರಿ ಜೀಪ್ ಕೂಡ ಆನೆ ಪಕ್ಕ ಸುಮ್ಮನೆ ನಿಂತಿದೆ. ಆದರೆ ಆನೆಗಳ ಗುಂಪು ಮಾತ್ರ ಪಕ್ಕಕ್ಕೆ ತೆರಳದೇ ಒಂದು ಗಂಟೆ ರಸ್ತೆ ಮಧ್ಯದಲ್ಲೇ ನಿಂತು ಪ್ರವಾಸಿಗರಿಗೆ ದರ್ಶನ ಕೊಟ್ಟಿದೆ. ಇದನ್ನೂ ಓದಿ: ದೇವಸ್ಥಾನ ಕಳ್ಳತನಕ್ಕೆ 7 ಬೀದಿನಾಯಿಗಳನ್ನು ಕೊಂದ ಕಳ್ಳರು
Advertisement
Advertisement
ಜನರನ್ನು ಕಂಡರೇ ಆನೆ ದಾಳಿ ಮಾಡಲು ಮಂದಾಗುವುದು, ಜೀಪನ್ನು ಅಟ್ಟಾಡಿಸುವುದು ಸಾಮಾನ್ಯ. ಆದರೆ ಇಲ್ಲಿ ಆರೀತಿ ಆಗಿಲ್ಲ. ಆನೆಗಳ ಗುಂಪು ಕಂಡು ಪ್ರವಾಸಿಗರಲ್ಲಿ ಆತಂಕದ ಸ್ಥಿತಿ ನಿರ್ಮಾಣಗೊಂಡಿದ್ದರೂ ಗಜ ಪರಿವಾರದ ಸೌಮ್ಯ ವರ್ತನೆಯಿಂದಾಗಿ ಮುದಗೊಂಡು ವೀಡಿಯೋ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್
Advertisement