ಮೈಸೂರು: ಹುಲಿ ಕಾರ್ಯಾಚರಣೆಗೆ ಬಂದು ಕಾಡಿನಲ್ಲಿ ನಾಪತ್ತೆಯಾಗಿದ್ದ ಆನೆ ಕೊನೆಗೂ ಪತ್ತೆಯಾಗಿದೆ.
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕು ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ತಾರಕಾ ಬೀಟ್ ನಿಂದ `ಅಶೋಕ’ ಹೆಸರಿನ ಆನೆ ತಪ್ಪಿಸಿಕೊಂಡಿತ್ತು. ಎಚ್.ಡಿ. ಕೋಟೆಯ ಅಂತರ ಸಂತೆ ಬಳಿ ಹುಲಿ ಹಿಡಿಯುವ ಕಾರ್ಯಾಚರಣೆಗೆ ಬಂದಿದ್ದ ಆನೆ ಸಿಡಿಮದ್ದಿನ ಶಬ್ಧಕ್ಕೆ ಹೆದರಿ ಮಾವುತನನ್ನು ಬೀಳಿಸಿ ಕಾಡಿನ ಒಳಗಡೆ ಓಡಿ ಹೋಗಿತ್ತು. ಇದನ್ನೂ ಓದಿ: ಹುಲಿ ಹಿಡಿಯಲು ಕಾರ್ಯಾಚರಣೆಗೆ ಬಂದಿದ್ದ ಆನೆ ಕಾಡಿನೊಳಗೆ ನಾಪತ್ತೆ
Advertisement
Advertisement
ಓಡಿ ಹೋಗಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಹಿಡಿಯುವ ಕಾರ್ಯಾಚರಣೆ ನಿಲ್ಲಿಸಿ ನಾಪತ್ತೆಯಾದ ಆನೆ ಹುಡುಕುವ ಕಾರ್ಯಾಚರಣೆ ಆರಂಭಿಸಿದ್ದರು. ಇದೀಗ ಡಿ. ಬಿ ಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ಅಶೋಕ ಆನೆ ಪತ್ತೆಯಾಗಿದೆ.
Advertisement
ಅರಣ್ಯ ಇಲಾಖೆ ಸಿಬ್ಬಂದಿಯ ಸತತ ಕಾರ್ಯಚರಣೆಯಿಂದ ಆನೆ ಸಿಕ್ಕಿದೆ. ಇಲಾಖೆಗೆ ಹುಲಿ ಹುಡುಕುವುದಕ್ಕಿಂತ ಆನೆ ಹುಡುಕುವುದೇ ದೊಡ್ಡ ತಲೆನೋವಾಗಿತ್ತು. ಇದೀಗ ಆನೆ ಸಿಕ್ಕ ನಂತರ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ. ನಾಗರಹೊಳೆ ವ್ಯಾಪ್ತಿಯ ಬಳ್ಳೆ ಆನೆ ಶಿಬಿರದಲ್ಲಿರುವ ಅಶೋಕ ಆನೆಯನ್ನು ಈಗ ಇರಿಸಲಾಗಿದೆ. ಇಂದು ಅಶೋಕ ಆನೆಯನ್ನು ಮತ್ತಿಗೋಡು ಅರಣ್ಯಕ್ಕೆ ವಾಪಸ್ಸು ಕಳುಹಿಸಲಾಗುತ್ತದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv