ಹಾಸನ: ಜಿಲ್ಲೆಯ ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲೂಕಗಳಲ್ಲಿ ಆನೆಗಳ ಹಾವಳಿ ಮುಂದುವರಿದಿದ್ದು, ಕೆಲದಿನಗಳಿಂದ ಗಂಡಾನೆಯೊಂದು ಜಿಲ್ಲೆಯ ಸಕಲೇಶ್‍ಪುರ ತಾಲೂಕಿನ ಹೆತ್ತೂರು ಬಳಿ ಬಂದು ಗ್ರಾಮದ ಬಳಿಯೇ ಓಡಾಡಿಕೊಂಡಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಈ ವೇಳೆ ಮರವೇರಿ ಕೂತು ಆನೆ ವೀಕ್ಷಿಸುತ್ತಿದ್ದ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಆನೆಯ ಚಲನವಲನವನ್ನು ವಿಡಿಯೋ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯೂ ಸಕಲೇಶ್ ಪುರ ತಾಲೂಕಿನ ನಿಡನೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡೊಂದು ಪ್ರತ್ಯಕ್ಷವಾಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿತ್ತು.
ಆಲೂರು ಸಕಲೇಶಪುರ ತಾಲೂಕಿನ ಗಡಿಭಾಗವಾದ ನಿಡನೂರು ಸಮೀಪ ಬಹುದಿನಗಳಿಂದ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು, ಮಲ್ಲಿಕ್ ಎಂಬವರ ಕಾಫಿ ತೋಟ ಹಾಗೂ ಗದ್ದೆಯಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದವು. ನಿರಂತರವಾಗಿ ಮಲೆನಾಡು ಭಾಗದಲ್ಲಿ ಆನೆ ಮತ್ತು ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ರೈತರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಹಲವಾರು ಪ್ರತಿಭಟನೆಗಳು ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=2lrxbci1W9w