ಹೈದರಾಬಾದ್: ಆನೆಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಜೆಸಿಬಿ ಮೂಲಕ ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟಿರುವ ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರು (Chittoor) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
Advertisement
ಸೋಮವಾರ ರಾತ್ರಿ ಗುಂಡ್ಲ ಪಲ್ಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆನೆ ಬಾವಿಯೊಳಗೆ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಘಟನೆ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚಂದ್ರುವಿನ ದೇಹದ ಮೇಲೆ ಹಲ್ಲೆಯ ಗಾಯವಿಲ್ಲ- ರೇಣುಕಾ ತಮ್ಮನ ಮಗ ಅಪಘಾತದಲ್ಲೇ ಸಾವು?
Advertisement
Advertisement
ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳ ತಂಡ ಸ್ಥಳಕ್ಕೆ ಧಾವಿಸಿ, ಬಾವಿಯಲ್ಲಿ ಸಿಕ್ಕಿಬಿದ್ದ ಆನೆಯನ್ನು ರಕ್ಷಿಸುವ ಪ್ರಯತ್ನವನ್ನು ಮೊದಲಿಗೆ ಮಾಡಿದರು. ನಂತರ ಎಷ್ಟೇ ಪ್ರಯತ್ನ ಮಾಡಿದರು, ಆನೆಯನ್ನು ಮೇಲಕ್ಕೆತ್ತಲು ಆಗದೇ, ಕೊನೆಗೆ ಜೆಸಿಬಿ ಯಂತ್ರವನ್ನು ಅಳವಡಿಸಿ ಬಾವಿಯ ಗೋಡೆ ಅಗೆದು ಕೊಂಚ ಜಾಗ ಮಾಡಿಕೊಂಡು ಆನೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಸೂಪರ್ ಸ್ಟಾರ್ ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ