ಹಾಸನ: ಒಂಟಿ ಸಲಗವೊಂದು ಬೆಳ್ಳಂಬೆಳಗ್ಗೆ ಗ್ರಾಮದೊಳಗೆ ಪ್ರವೇಶಿ, ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಬ್ಬಿನಗದ್ದೆ ಗ್ರಾಮದಲ್ಲಿ ನಡೆದಿದೆ.
ಬೆಳ್ಳಂ ಬೆಳಗ್ಗೆ ಗ್ರಾಮದೊಳಕ್ಕೆ ಎಂಟ್ರಿಕೊಟ್ಟ ಒಂಟಿ ಸಲಗ, ಪ್ರಮುಖ ಬೀದಿಯಲ್ಲಿ ಸಂಚಾರ ನಡೆಸಿದೆ. ಒಂಟಿ ಸಲಗದ ಓಡಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬೃಹದಾಕಾರದ ಆನೆಯನ್ನು ನೋಡುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಕಂಗಾಲಾಗಿದ್ದಾರೆ. ಗ್ರಾಮಸ್ಥರು ಸಲಗದ ವೀಡಿಯೋ ಮಾಡಿದ್ದು, ವೈರಲ್ ಆಗಿದೆ. ಇದನ್ನೂ ಓದಿ: ಕೋಟೆನಾಡಲ್ಲಿ ತಡರಾತ್ರಿ ಅಶೋಕ್ ಸಿಟಿರೌಂಡ್ಸ್
ಒಂಟಿ ಸಲಗ ಪದೇ ಪದೇ ಗ್ರಾಮದೊಳಗೆ ಪ್ರವೇಶಿಸುತ್ತದೆ. ಹಲವೆಡೆ ಬೆಳೆ ಕೂಡ ನಾಶವಾಗಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.