ಚಾಮರಾಜನಗರ: ಬೆನ್ನತ್ತಿ ಬರುತ್ತಿದ್ದ ಸಲಗದ ಮುಖಕ್ಕೆ ಗುಂಡು ಹಾರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಸಿಬ್ಬಂದಿ ಆನೆಗೆ ಗುಂಡು ಹೊಡೆದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಯಡಿಯಾಳ ಅರಣ್ಯ ವಲಯದಲ್ಲಿ ನಡೆದಿದೆ.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ರಹೀಂ ಎಂಬವನು ತನ್ನನ್ನು ಬೆನ್ನತ್ತಿ ಬರುತ್ತಿದ್ದ ಒಂಟಿ ಸಲಗದ ಮುಖಕ್ಕೆ ಗುಂಡು ಹಾರಿಸಿದ್ದನು. ಉಮೇಶ್ ಎಂಬವನು ಇದನ್ನು ವಿಡಿಯೋ ಮಾಡಿ ಮಾ. 2ರಂದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದನು.
Advertisement
ಈ ವಿಡಿಯೋ ಸಖತ್ ವೈರಲ್ ಆಗಿ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಆನೆಯ ಮುಖದತ್ತ ಬಂದೂಕು ಇಟ್ಟು ಗುಂಡು ಹಾರಿಸಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಪರಿಸರವಾದಿಗಳು ಆಕ್ರೋಶ ಹೊರ ಹಾಕಿದ್ದಾರೆ. ಇದರಿಂದ ಎಚ್ಚೆತ್ತ ಬಂಡೀಪುರ ಸಿಎಫ್‍ಒ ಬಾಲಚಂದ್ರ ರಹೀಂನನ್ನು ಸೇವೆಯಿಂದ ವಜಾ ಮಾಡಿ ಉಮೇಶ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.