ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ (Bhadra Wildlife Sanctuary) ವ್ಯಾಪ್ತಿಯ ಹೆಬ್ಬೆ ವಲಯದಲ್ಲಿ ಆನೆಯ (Elephant) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಒಂಟಿ ದಂತ ಹೊಂದಿದ್ದ ಸುಮಾರು 50 ವರ್ಷ ಪ್ರಾಯದ ಒಂಟಿ ಸಲಗ ಸಾವನ್ನಪ್ಪಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕಳ್ಳ ಬೇಟೆ ನಿಗ್ರಹ ಪಡೆಯ ಸಿಬ್ಬಂದಿ ಅರಣ್ಯದಲ್ಲಿ ಗಸ್ತು ತಿರುಗುವಾಗ ಆನೆಯ ಕಳೆಬರಹ ಪತ್ತೆಯಾಗಿದೆ. ಕಳೆದ ಹಲವು ತಿಂಗಳುಗಳಿಂದ ಈ ಆನೆಯ ಎಡಗಾಲಿಗೆ ಪೆಟ್ಟಾಗಿದ್ದರಿಂದ ಕುಂಟುತ್ತಾ ಅರಣ್ಯದಲ್ಲಿ ಆಹಾರ ಹುಡುಕುತ್ತಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ನದಿಯಲ್ಲಿ ಈಜಲು ಹೋದ ಇಬ್ಬರು ಹುಡುಗರು ನೀರುಪಾಲು
ಆನೆಯ ಮೃತ ದೇಹವನ್ನು ಅರಣ್ಯಾಧಿಕಾರಿ ಪ್ರಕಾಶ್ ನೇತೃತ್ವದ ಪಶು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ. ಈ ವೇಳೆ ಆನೆಯ ಹೊಟ್ಟೆಯಲ್ಲಿ ಆಹಾರ ಕಂಡು ಬಂದಿಲ್ಲ. ಹೀಗಾಗಿ ಆನೆ ಆಹಾರ ಸಿಗದೇ ಹಸಿವಿನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಆನೆಯ ದಂತವನ್ನು ತೆಗೆದು ಆನೆಯ ಕಳೆಬರಹವನ್ನ ಅಲ್ಲಿಯೇ ಬಿಡಲಾಗಿದೆ.
ಜ.30ರಂದು ಮೂಡಿಗೆರೆ-ಸಕಲೇಶಪುರ ಅರಣ್ಯ ಗಡಿ ವ್ಯಾಪ್ತಿಯಲ್ಲಿ ಕಾಡಾನೆಯೊಂದರ ಕಾಲು ಕಲ್ಲುಗಳ ನಡುವೆ ಸಿಲುಕಿ ಹೊರಬರಲಾರದೇ ಸಾವನ್ನಪ್ಪಿತ್ತು. ಇದನ್ನೂ ಓದಿ: ಚಾಮುಲ್‌ನಿಂದ ಹೈನುಗಾರರಿಗೆ ಯುಗಾದಿ ಗಿಪ್ಟ್ – ಲೀಟರ್ ಹಾಲಿಗೆ 4 ರೂ. ಹೆಚ್ಚಳ