ಚಾಮರಾಜನಗರ: ಕೆರೆಗೆ ನೀರು ಕುಡಿಯಲು ಹೋದ ವೇಳೆ ಹೆಣ್ಣಾನೆಯೊಂದು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಬಂಡಿಪುರದ ಕುಂದಗೆರೆ ವಲಯದ ಸಿದ್ರಾಮಯ್ಯನ ಕಟ್ಟೆಯಲ್ಲಿ ಹೆಣ್ಣಾನೆ ನೀರು ಕುಡಿಯಲು ಹೋದ ವೇಳೆ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ 4 ಗಂಟೆಯ ವೇಳೆಯಲ್ಲಿ ಹೆಣ್ಣಾನೆಯೊಂದು ನೀರು ಕುಡಿಯಲು ಕೆರೆಯ ಬಳಿ ಹೋಗಿದೆ.
Advertisement
Advertisement
ಬೇಸಿಗೆ ಕಾಲವಾದ್ದರಿಂದ ಕೆರೆಯಲ್ಲಿ ನೀರಿಗಿಂತ ಕೆಸರು ಹೆಚ್ಚಿರುವ ಕಾರಣ ಆನೆ ನೀರಿಗಾಗಿ ಕೆರೆಯ ಮಧ್ಯ ಭಾಗಕ್ಕೆ ಹೋಗಿದೆ. ಈ ವೇಳೆ ಆನೆ ಕೆಸರಲ್ಲಿ ಸಿಲುಕಿದ್ದು, ಮೇಲೆ ಹೇಳಲು ಒದ್ದಾಡಿದೆ. ಕೊನೆಗೆ ಮೇಲೆ ಹೇಳಲು ಸಾಧ್ಯವಾಗದ ಕಾರಣ ಆನೆ ಸುಸ್ತಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.
Advertisement
ಆನೆ ಮೃತಪಟ್ಟಿದ್ದನ್ನು ಗ್ರಾಮಸ್ಥರು ನೋಡಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.