ಚಾಮರಾಜನಗರ: ಆಹಾರ ಅರಸಿ ಬಂದ ಒಂಟಿ ಸಲಗವೊಂದು ಜಮೀನುಗಳಿಗೆ ಲಗ್ಗೆ ಇಟ್ಟು ಟೊಮೆಟೊ, ತೆಂಗನ್ನು ತುಳಿದು ತಿಂದು ನಾಶಪಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ, ಕೋಟೆಕೆರೆಯಲ್ಲಿ ನಡೆದಿದೆ.
ಮಂಚಹಳ್ಳಿ ಗ್ರಾಮದ ಮಹೇಶ್, ಕೋಟೆಕೆರೆಯ ಮಾದೇಗೌಡ ಎಂಬವರಿಗೆ ಸೇರಿದ ಜಮೀನುಗಳಿಗೆ ಆನೆ ಲಗ್ಗೆ ಇಟ್ಟು ಫಸಲು ನಾಶ ಮಾಡಿದೆ. ಇದನ್ನೂ ಓದಿ: ಎರಡು ದಿನದಿಂದ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಸೇತುವೆ
ಮಹೇಶ್ ಅವರ ನಾಲ್ಕು ಎಕರೆ ಟೊಮೆಟೊ, ಮಾದೇಗೌಡ ಅವರಿಗೆ ಸೇರಿದ 3 ಎಕರೆ ಟೊಮೆಟೊ, ತೆಂಗಿನ ಮರಗಳನ್ನು ತುಳಿದು ನಾಶ ಮಾಡಿದೆ.
ರೈತರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ಕೊಡಬೇಕು. ದಾಳಿಯಾದ ಬಳಿಕ ಮಹಜರು ನಡೆಸಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಮಹಾದೇವನಾಯಕ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟೆಡ್ಡಿಬೇರ್ ವೇಷ ಧರಿಸಿ ದರ್ಶನ್ ನೋಡಲು ಬಂದ ಅಭಿಮಾನಿ