ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮರಿಯಾನೆ ಬಂಡೆಯಿಂದ ಜಾರಿ ಬಿದ್ದು, ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಳೆದ ತಿಂಗಳಷ್ಟೇ ತಡೆ ಬೇಲಿಗೆ ಕತ್ತು ಸಿಲುಕಿ ಜಿರಾಫೆ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಬಂಡೆ ಮೇಲಿನಿಂದ ಜಾರಿ ಬಿದ್ದು ಮರಿಯಾನೆಯೊಂದು ಸಾವನ್ನಪ್ಪಿದೆ. ಕಳೆದ 4 ದಿನಗಳ ಹಿಂದೆ ಜೈವಿಕ ಉದ್ಯಾನವನದ 5 ವರ್ಷದ ಗಂಡು ಆನೆಮರಿ ಶ್ರೀರಾಮುಲು ಬಂಡೆ ಮೇಲಿಂದ ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದೆ.
Advertisement
Advertisement
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ ಸಫಾರಿಯಲಿದ್ದ ಶ್ರೀರಾಮುಲು ಆನೆಮರಿ ರಾತ್ರಿ ವೇಳೆ ಕಾಡಿಗೆ ಮೇಯಲು ಬಿಡಲಾಗಿತ್ತು. ಬಂಡೆ ತುದಿಯಲ್ಲಿ ಆಟ ಆಡಬೇಕಾದರೆ ಕಾಲು ಜಾರಿ ಮೇಲಿಂದ ಬಿದ್ದು, ಸಾವನ್ನಪ್ಪಿರುವ ಶಂಕೆ ಇದೆ. ಅದು ಅಲ್ಲದೇ ಕಾಡಿನ ಆನೆಯೊಂದಿಗೆ ಮುಖಾಮುಖಿಯಾದ ಸಮಯದಲ್ಲಿ ಏನಾದರೂ ಕಾಡಿನ ಆನೆ ಮೇಲಿಂದ ಕೆಳಕ್ಕೆ ತಳ್ಳಿರಬಹುದೆಂಬ ಅನುಮಾನವೂ ಮೂಡಿದೆ. ಇದನ್ನೂ ಓದಿ: ಆರ್ಯನ್ ಖಾನ್ ಮೂರು ವರ್ಷದಿಂದ ಡ್ರಗ್ ಸೇವಿಸುತ್ತಿದ್ದಾರೆ – ಎನ್‍ಸಿಬಿ
Advertisement
ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿಗಳಿಂದ ಮೃತಪಟ್ಟ ಆನೆಮರಿಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ.