ಚಾಮರಾಜನಗರ: ಕಾಡಿನ ನಡುವಿನ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ತನ್ನ ಮರಿ ರಕ್ಷಣೆಗಾಗಿ ತಾಯಿ ಆನೆ ದಾಳಿ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೂಲೆಹೊಳೆ ಸಮೀಪ ಚಿಕ್ಕಮಗಳೂರಿನಿಂದ ಕಲ್ಲಿಕೋಟೆಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮೇಲೆ ತಾಯಿ ಆನೆ ದಾಳಿ ಮಾಡಿದೆ. ಬಸ್ ಚಲಿಸುವ ವೇಳೆ ಮರಿ ಹಾಗೂ ತಾಯಿ ಆನೆ ರಸ್ತೆ ಪಕ್ಕದಲ್ಲಿ ನಿಂತಿವೆ. ಈ ವೇಳೆ ಮರಿ ಆನೆಗೆ ಅಪಾಯವಾಗಬಹುದೆಂದು ಬಸ್ಸನ್ನು ತಾಯಿ ಆನೆ ಅಟ್ಟಿಸಿಕೊಂಡು ಹೋಗಿದೆ.
Advertisement
Advertisement
ಆನೆ ಬಸ್ಸಿನತ್ತ ದಾವಿಸುತ್ತಿದ್ದ ಅಪಾಯವನ್ನು ಕಂಡ ಚಾಲಕ ವೇಗವಾಗಿ ಬಸ್ಸನ್ನು ಹಿಂದೆ ಚಾಲನೆ ಮಾಡಿದ್ದಾನೆ. ಅದರು ಸಮಾಧಾನಗೊಳ್ಳದ ಆನೆ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಬಳಿಕ ಹಿಂದಿರುಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಬಸ್ಸಿಗೆ ಅಡ್ಡವಾಗಿದ್ದ ಆನೆಗಳ ಗುಂಪು ಬಳಿಕ ಕಾಡಿನತ್ತ ತೆರಳಿದೆ. ಆನೆ ದಾಳಿ ನಡೆಸಿದ ವೇಳೆ ಬಸ್ ಚಾಲಕ ಸೇರಿದಂತೆ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಆನೆಯ ದಾಳಿ ನಡೆಸಿರುವ ವಿಡಿಯೋವನ್ನು ಬಸ್ಸಿನಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ವೇಳೆ ಪ್ರಯಾಣಿಕರು ಚೀರಾಟ ನಡೆಸಿದ್ದರಿಂದ ಆನೆ ಹಿಂದಿರುಗಿದೆ.
Advertisement
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಳಿನೆಲೆ ಬಳಿಯ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಶನಿವಾರವಷ್ಟೇ ಧರ್ಮಸ್ಥಳದಿಂದ ಕುಕ್ಕೆಗೆ ತೆರಳಿದ್ದ ಯಾತ್ರಿಕರ ಓಮ್ನಿ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಜಖಂ ಗೊಳಿಸಿತ್ತು. ಘಟನೆಯ ವೇಳೆ ಆರು ಮಂದಿ ಕಾರಿನಲ್ಲಿ ತೆರಳುತ್ತಿದ್ದು, ಇವರಲ್ಲಿ ಕಾರಿನ ಮುಂಭಾಗದಲ್ಲಿ ಕುಳಿತ್ತಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಕಾರಿನ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಬಸ್ಸೊಂದು ಹಾರ್ನ್ ಮಾಡುತ್ತಾ ಬಂದ ಕಾರಣ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿತ್ತು.
Advertisement
https://www.youtube.com/watch?v=fnHvfRLYFbk