ಮೈಸೂರು: ಆನೆಯೊಂದು ಜೀಪ್‍ನಲ್ಲಿ ಬರುತ್ತಿದ್ದ ಪ್ರವಾಸಿಗರ ಮೇಲೆ ಎರಗಲು ಮುಂದಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ಸಂರಕ್ಷಿತ ಅರಣ್ಯದ ಬಳಿ ನಡೆದಿದೆ.
ಪ್ರವಾಸಿಗರು ಜೀಪ್‍ನಲ್ಲಿ ಕಾಡಿನೊಳಗೆ ಹೋಗಿದ್ದರು. ಈ ವೇಳೆ ಕಾಡಾನೆ ಅವರನ್ನು ನೋಡಿ ಜೀಪ್ ಮೇಲೆ ಎರಗಲು ಮುಂದಾಗಿದೆ. ಆದರೆ ಅರಣ್ಯ ಪ್ರದೇಶದ ಟ್ರಂಚ್ ಪಕ್ಕ ಅಳವಡಿಸಿದ್ದ ಕಬ್ಬಿನದ ರಾಡ್‍ಗೆ ಒಂಟಿ ಸಲಗ ಡಿಕ್ಕಿ ಹೊಡೆದಿದೆ. ಕಬ್ಬಿಣದ ರಾಡ್‍ನಿಂದಾಗಿ ಜೀಪ್ ಸವಾರರು ಸೇಫ್ ಆಗಿದ್ದಾರೆ.
Advertisement
Advertisement
ಇತ್ತೀಚೆಗೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಲ್ತಾನ ಎಂಬ ಹುಲಿ ಪ್ರವಾಸಿಗರ ವಾಹನವನ್ನು ಬೆನ್ನಟ್ಟಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಆದರೆ ಪ್ರಾಣಿ ಪ್ರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹುಲಿ ವಾಹನವನ್ನು ಬೆನ್ನಟ್ಟಿಲ್ಲ ಬದಲಿಗೆ ಆಟವಾಡುತ್ತಿದೆ ಎಂದು ಹೇಳಿದ್ದರು.
Advertisement
ಕಾಡು ಪ್ರಾಣಿಗಳು ತಮ್ಮ ವಾಸಸ್ಥಾನವನ್ನು ಕಳೆದುಕೊಂಡಿರುವುದರಿಂದ ಈ ರೀತಿ ಮಾಡುತ್ತಿವೆ ಎಂದು ಕೆಲವರು ಹೇಳಿದ್ದರು. ಆದರೆ ವರದಿಯ ಪ್ರಕಾರ ರಾಷ್ಟ್ರೀಯ ಉದ್ಯಾನ ಹೆಚ್ಚು ಹುಲಿಗಳ ತಾಣವಾಗಿದೆ. ತನ್ನ ಸಾಮಥ್ರ್ಯಕ್ಕಿಂತಲೂ ಹೆಚ್ಚು ಹುಲಿಗಳನ್ನು ಹೊಂದಿದೆ ಎಂದು ವರದಿಯಾಗಿದೆ.