ಮಡಿಕೇರಿ: ಮೃಗಾಲಯದಿಂದ ಸಾಕು ಪ್ರಾಣಿಗಳು ತಪ್ಪಿಸಿಕೊಂಡು ನಗರದಲ್ಲಿ ಓಡಾಟ ಮಾಡಿರುವುದನ್ನು ನೀವೇಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮೃಗಾಲಯ ಚಿತ್ರದಲ್ಲಿ ನೋಡಿರುತ್ತಿರಿ. ಆದರೆ ಕಾಡಾನೆಯೊಂದು ಉದ್ಯಾನವನಕ್ಕೆ ಬಂದ ಹಿನ್ನೆಲೆಯಲ್ಲಿ ನೂರಾರು ಜನರು ಪ್ರಾಣ ಉಳಿಸಿಕೊಳ್ಳಲು ಓಡಾಟ ನಡೆಸಿರೋದು ನೋಡಿದ್ದೀರ? ಅಂಥಹದ್ದೊಂದು ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಉದ್ಯಾನವನದಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.
ಇಂದು ಶಾನಿವಾರ ಆಗಿದ್ದರಿಂದ ನೂರಾರು ಪ್ರವಾಸಿಗರು ಹಾರಂಗಿ ಉದ್ಯಾನವನದಲ್ಲಿ ಇರುವ(ನೀರಿನ ಕಾರಂಜಿ) ನೋಡಲು ಆಗಮಿಸಿದ್ದಾರೆ. ಇದೇ ಹಾರಂಗಿ ಜಲಾಶಯದ ಉದ್ಯಾನವನಕ್ಕೆ ಕಾಡಾನೆಯೊಂದು ಲಗ್ಗೆಯಿಟ್ಟು ಜಲಾಶಯದ ಸುತ್ತಮುತ್ತ ಓಡಾಟ ನಡೆಸಿದೆ. ಅಷ್ಟೇ ಅಲ್ಲದೇ ಹಾರಂಗಿ ಅಣೆಕಟ್ಟು ಆವರಣದಲ್ಲಿರುವ ಗೇಟ್ ಒಂದನ್ನು ಒದ್ದು ಹೊರಕ್ಕೆ ಬಂದಿದೆ. ಇದನ್ನು ಕಂಡ ನೂರಾರು ಪ್ರವಾಸಿಗರು ಓಡಿ ಹೋಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ತೊಡೆಯಲ್ಲಿ ಕುಳಿತ ವಿದ್ಯಾರ್ಥಿನಿಯರು- ಒಟ್ಟಿಗೆ ಕೂರಬಾರದು ಎಂದಿದ್ದಕ್ಕೆ ವಿಭಿನ್ನ ಪ್ರತಿಭಟನೆ
Advertisement
Advertisement
ಕಾಡಾನೆ ಉದ್ಯಾನವನದ ಒಳಗೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಕಾಡಾನೆಯನ್ನು ದೊಡ್ಡತ್ತೂರು ಅರಣ್ಯ ಪ್ರದೇಶದತ್ತ ಓಡಿಸಿದ್ದಾರೆ. ಹಾರಂಗಿ ಅಣೆಕಟ್ಟಿಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆ ಎನ್ನಲಾಗಿದೆ. ಇದನ್ನೂ ಓದಿ: ನಮ್ಮದು ಕಾಂಗ್ರೆಸ್ ಪಾರ್ಟಿ ಅಲ್ಲ, ಬೇಲ್‍ನಲ್ಲಿರುವ ಪಕ್ಷವಲ್ಲ: ಆರ್. ಅಶೋಕ್
Advertisement
ಈ ಕಾಡಾನೆ ಸಕಲೇಶಪುರ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಕಾರಣ ಕಳೆದ 1 ವರ್ಷದ ಹಿಂದೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ 2 ದಿನಗಳ ಹಿಂದೆ ಈ ಪ್ರದೇಶಕ್ಕೆ ಆನೆ ಆಗಮಿಸಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಇದೀಗ ಕಾಡಾನೆ ಕೂಡಿಗೆ ಸಮೀಪದ ಬೆಂಡೆಬೆಟ್ಟ ಅರಣ್ಯದಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು ಈ ನಿಟ್ಟಿನಲ್ಲಿ ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿ ಶಿವರಾಮ್ ತಂಡ ಕಾಡಾನೆ ಪತ್ತೆಗೆ ಕ್ರಮ ಕೈಗೊಂಡಿದೆ.