ಚೆನ್ನೈ: ಆನೆ ತನ್ನ ಮರಿ ಜೊತೆಗೆ ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ದೊಡ್ಡನಾಯಕನ ಪಾಳ್ಯದಲ್ಲಿ ನಡೆದಿದೆ.
ಗುರುವಾರ ರಾತ್ರಿ 11.50ರ ವೇಳೆಗೆ ಮನೆಗೆ ನುಗ್ಗಿ ಆನೆ ಆಹಾರಕ್ಕಾಗಿ ಹುಡುಕಾಡಿದೆ. ಯಾವುದೇ ಆಹಾರ ಸಿಗದ ಕಾರಣ ಮನೆಯಿಂದ ಮರಳಿದೆ. ಆನೆ ಪ್ರವೇಶಿಸುತ್ತಿರುವ ದೃಶ್ಯಗಳು ಮನೆಯ ಸಮೀಪದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಆನೆ ಪ್ರವೇಶಿಸಿದ ದಾರಿಯಲ್ಲೆ ಕಾರು ಮತ್ತು ಎರಡು ಬೈಕ್ ಗಳು ನಿಂತುಕೊಂಡಿತ್ತು. ಆದರೆ ಈ ವಾಹನಗಳಿಗೆ ಯಾವುದೇ ಹಾನಿ ಮಾಡದೇ ಆನೆ ತೆರಳಿರುವುದು ವಿಶೇಷವಾಗಿದೆ.(ಇದನ್ನೂ ಓದಿ: ಆನೆ ಮುಂದೆ ಬಾಹುಬಲಿ ಸ್ಟಂಟ್ ಮಾಡಲು ಹೋಗಿ ಫುಟ್ ಬಾಲ್ ನಂತೆ ಗಾಳಿಯಲ್ಲಿ ಹಾರಿಬಿದ್ದ! ವಿಡಿಯೋ)
Advertisement
ಸಾಧಾರಣವಾಗಿ ಆನೆಗಳು ಆಹಾರ ಹುಡುಕಿಕೊಂಡು ತಿರುಗಾಡುತ್ತಿರುತ್ತವೆ. ಆಹಾರ ಸಿಗದೇ ಇದ್ದಲ್ಲಿ ರೊಚ್ಚಿಗೆದ್ದು ಸ್ಥಳದಲ್ಲಿದ್ದ ವಸ್ತುಗಳಿಗೆ ಹಾನಿ ಮಾಡುತ್ತವೆ. ಈ ಪ್ರದೇಶ ಅರಣ್ಯದ ಸಮೀಪದಲ್ಲಿದ್ದು ಈ ಹಿಂದೆ ಆನೆಯನ್ನು ಪ್ರವೇಶಿಸಿ ಆಹಾರ ಸಿಗದೇ ಇದ್ದಾಗ ಮನೆಯ ಕಾಂಪೌಂಡನ್ನು ಧ್ವಂಸ ಮಾಡಿತ್ತು. ಇದನ್ನೂ ಓದಿ: ವ್ಯಕ್ತಿ ಸಿಗಲಿಲ್ಲ ಎಂದು ಕಾರಿನ ಮೇಲೆ ಆಕ್ರೋಶವನ್ನು ತೀರಿಸಿಕೊಂಡ ಬಂಡೀಪುರದ ಆನೆ
Advertisement
#WATCH: An elephant, along with an elephant calf, enters a house in Coimbatore's Periyanaickenpalayam in search of food, returns without causing any damage (Source: CCTV) pic.twitter.com/GRxpq6CsDr
— ANI (@ANI) December 2, 2017
Advertisement
Female elephant rescues itself and its new born calf from a pit in Periyanaickenpalayam(Tamil Nadu) pic.twitter.com/u0WhbQAWBl
— ANI (@ANI) October 26, 2015