– ಗ್ರಾಮಸ್ಥರ ಮನವೊಲಿಸಿ ಆಸ್ಪತ್ರೆಗೆ ದಾಖಲಿಸಿದ ಅಧಿಕಾರಿಗಳು
ರಾಮನಗರ: ಕನಕಪುರದಲ್ಲಿ (Kanakapura) ಕಾಡಾನೆ (Elephant) ದಾಳಿಯಿಂದ ರೈತರೊಬ್ಬರ ಕಾಲು ಮುರಿದಿದ್ದು, ಸಿಟ್ಟಿಗೆದ್ದ ಗ್ರಾಮಸ್ಥರು ಗಾಯಾಳುವನ್ನು ನಡುರಸ್ತೆಯಲ್ಲೇ ಮಲಗಿಸಿ ಪ್ರತಿಭಟಿಸಿದ್ದಾರೆ.
ನಾರಾಯಣಪುರ ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ರೈತ ಶ್ರೀನಿವಾಸ್ (45) ಮೇಲೆ ಕಾಡಾನೆ ದಾಳಿ ನಡೆಸಿದೆ. ಇದರಿಂದ ರೈತನ ಕಾಲು ಮುರಿದಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಗಾಯಾಳುವನ್ನು ರಸ್ತೆಯಲ್ಲೇ ಮಲಗಿಸಿ ಅರಣ್ಯ ಅಧಿಕಾರಿಗಳ (Forest Department) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಳಿಕ ಕೃಷಿಯಲ್ಲಿ ತೊಡಗಿಕೊಳ್ತೀನಿ: ಅಮಿತ್ ಶಾ
ಹಲವು ಬಾರಿ ದೂರು ನೀಡಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮಸ್ಥರ ಮನವೊಲಿಸಿ ಗಾಯಾಳುವನ್ನ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 5 ವರ್ಷ ಸಿದ್ದರಾಮಯ್ಯನವರೇ ಸಿಎಂ – ಯತೀಂದ್ರ ಬ್ಯಾಟಿಂಗ್