ಬೆಂಗಳೂರು: ಕರ್ನಾಟಕ – ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಇಂದು ಸಹ 2 ಕಾಡಾನೆಗಳು ಗ್ರಾಮದ ತೋಟಕ್ಕೆ ನುಗ್ಗಿ ಬೆಳೆನಾಶ ಮಾಡಿರುವ ಘಟನೆ ಕರ್ನಾಟಕದ ಗಡಿ ಆನೇಕಲ್ ಗೆ ಹೊಂದಿಕೊಂಡಿರುವ ತಮಿಳುನಾಡು ಅರಣ್ಯದಂಚಿನಲ್ಲಿ ನಡೆದಿದೆ.
ಅರಣ್ಯದಂಚಿನ ಗ್ರಾಮವಾದ ಪತ್ತಕೋಟ ಗ್ರಾಮದಲ್ಲಿ ಇಂದು ಮುಂಜಾನೆ 2 ಕಾಡಾನೆಗಳು ಗ್ರಾಮದಲ್ಲಿನ ತೋಟಗಳಿಗೆ ನುಗ್ಗಿ ಅಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶಮಾಡಿದೆ. ಅಲ್ಲದೇ ಸುಮಾರು 40ಕ್ಕೂ ಕಾಡಾನೆ ಹಿಂಡು ಕಳೆದ 2 ತಿಂಗಳಿಂದ ಆನೇಕಲ್‍ಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು, ಸುಳಗಿರಿ, ಡೆಂಕನಿಕೋಟೆ ಹಾಗೂ ಜವಳಗಿರಿ ಓಡಾಟ ನಡೆಸಿದೆ. ಆನೆ ಹಿಂಡು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಆನೆಗಳ ಹಿಂಡು ಅರಣ್ಯದಂಚಿನ ಗ್ರಾಮಗಳಿಗೆ ನುಗ್ಗಿ ಪ್ರಾಣ ಹಾನಿ ಹಾಗೂ ಬೆಲೆ ನಾಶ ಮಾಡಿದೆ. ಕಳೆದೊಂದು ವಾರದಲ್ಲಿ ಆನೆಗಳ ದಾಳಿಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಒಂದು ಹಸು ಕೂಡ ಬಲಿಯಾಗಿದೆ. ಆನೆಗಳನ್ನು ಕಾಡಿಗೆ ಓಡಿಸಲು ತಮಿಳುನಾಡು ಅರಣ್ಯ ಇಲಾಖೆ ಸರಿಯಾದ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲ ಎಂಬುದು ಗಡಿ ಪ್ರದೇಶದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv