ಸಾಂಧರ್ಬಿಕ ಚಿತ್ರ
ಮೈಸೂರು: ಕಬ್ಬಿಣದ ಕಂಬಿಗಳ ನಡುವೆ ಸಿಲುಕಿ ಆನೆಯೊಂದು ಪ್ರಾಣಬಿಟ್ಟಿರುವ ದಾರುಣ ಘಟನೆ ಇಂದು ಜಿಲ್ಲೆಯ ವೀರನಹೊಸಳ್ಳಿ ಗ್ರಾಮದ ಬಳಿ ನಡೆದಿದೆ.
Advertisement
ವೀರನಹೊಸಳ್ಳಿ ಗ್ರಾಮವು ಅರಣ್ಯ ಅಂಚಿನಲ್ಲಿ ಇರುವುದರಿಂದ ಈ ಭಾಗದಲ್ಲಿ ಆನೆಗಳು ಓಡಾಡುವುದು ಸಹಜ. ಆದರಿಂದ ಅರಣ್ಯ ಇಲಾಖೆಯವರು ಆನೆಗಳು ಊರಿನೊಳಗೆ ಬಾರಬಾರದು ಎಂದು ಅರಣ್ಯದ ಸುತ್ತಲು ಕಬ್ಬಿಣದ ಕಂಬಿಗಳನ್ನು ಹಾಕಿದ್ದರು. ಆದರೆ ಇಂದು ಬೆಳಗಿನ ಜಾವ ಗಂಡಾನೆಯೊಂದು ಕಬ್ಬಿಣದ ಕಂಬಿಗಳನ್ನು ದಾಟಲು ಪ್ರಯತ್ನಿಸಿದೆ. ಈ ವೇಳೆ ಆನೆಯ ಎರಡು ಕಾಲುಗಳು ಕಂಬಿಗಳ ನಡುವೆ ಸಿಲುಕಿದೆ.
Advertisement
ಕಂಬಿಗಳ ನಡುವಿನಿಂದ ಕಾಲನ್ನು ಬಿಡಿಸಿಕೊಳ್ಳಲು ಆನೆಯು ಬಹಳಷ್ಟು ಕಷ್ಟ ಪಟ್ಟು, ಬಳಿಕ ಬಿಡಿಸಿಕೊಳ್ಳಲಾಗದೇ ನರಳಿ, ನರಳಿ ಸ್ಥಳದಲ್ಲೇ ಮೃತಪಟ್ಟಿದೆ. ಈ ಪ್ರದೇಶದಲ್ಲಿ ಊರಿನ ಜನರು ಹೆಚ್ಚಾಗಿ ಓಡಾಡುವುದಿಲ್ಲ. ಆದರಿಂದ ಆನೆಯು ಕಂಬಿಗಳ ನಡುವೆ ಸಿಲುಕಿದ್ದ ಸಂಗತಿ ಯಾರ ಗಮನಕ್ಕೂ ಬಂದಿರಲಿಲ್ಲ. ಈ ಘಟನೆ ನಡೆದ ಬಹಳ ಸಮಯದ ಬಳಿಕ ಅದೇ ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯರೊಬ್ಬರು ಆನೆ ಮೃತಪಟ್ಟಿರುವುದನ್ನು ಕಂಡು ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಆನೆಯ ಮೃತದೇಹವನ್ನು ಕಂಬಿಗಳಿಂದ ಬಿಡಿಸಿದ್ದಾರೆ.
Advertisement
https://www.youtube.com/watch?v=x7tq3cyAeWo
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com