– ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮೂರ್ತಿ ದಸಾಕ ಭಾಗಿ
ಬೆಂಗಳೂರು: ಸೆಮಿಕಂಡಕ್ಟರ್ (Semiconductor) ಕ್ಷೇತ್ರದಲ್ಲಿ ಸ್ಥಳೀಯ ಬೇಡಿಕೆ ಹೆಚ್ಚಾಗುತ್ತಿದ್ದು, 5-6 ವರ್ಷಗಳಲ್ಲಿ ದೇಶವು ಈ ಕ್ಷೇತ್ರದಲ್ಲಿ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಹಂತ ಮುಟ್ಟಲಿದೆ ಎಂದು ಟಾಟಾ ಎಲೆಕ್ಟ್ರಾನಿಕ್ಸ್ನ (Tata Electronics) ಉಪಾಧ್ಯಕ್ಷ ಮೂರ್ತಿ ದಸಾಕ (Murty Dasaka) ಮಂಗಳವಾರ ಹೇಳಿದರು.
ಇಲ್ಲಿ ಆರಂಭವಾದ 27ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶ (Bengaluru Tech Summit)ದಲ್ಲಿ ಏರ್ಪಡಿಸಿದ್ದ ʻಸೆಮಿಕಂಡಕ್ಟರ್ ಉತ್ಪಾದನೆ: ತಾಂತ್ರಿಕ ಮತ್ತು ವಾಣಿಜ್ಯಿಕ ಯಶಸ್ಸಿನ ದಾರಿʼ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ವಿದ್ಯುತ್ ಬಿಲ್ ಬಾಕಿ, ದೆಹಲಿಯ ಹಿಮಾಚಲ ಭವನ ಮುಟ್ಟುಗೋಲು ಹಾಕಲು ಹೈಕೋರ್ಟ್ ಆದೇಶ
Advertisement
Advertisement
ದೇಶವು 5 ಟ್ರಿಲಿಯನ್ ಡಾಲರ್ (USD) ಮೌಲ್ಯದ ಆರ್ಥಿಕತೆಯ ಗುರಿ ಸಾಧಿಸಬೇಕು ಅಂದ್ರೆ, ಸ್ಥಳೀಯವಾಗಿ ಸೆಮಿಕಂಡಕ್ಟರ್ ಉತ್ಪಾದನೆಗೆ ಒತ್ತು ಕೊಡಬೇಕು. ಇದಕ್ಕೆ ಬೇಕಾದ ಸಮರ್ಪಕ ಕಾರ್ಯ ಪರಿಸರವನ್ನು ನಾವು ಅಭಿವೃದ್ಧಿ ಪಡಿಸಬೇಕು. ಇದರಿಂದ ದೇಶವು ಸುಸ್ಥಿರ ಅಭಿವೃದ್ಧಿಯ ಕನಸನ್ನು ನನಸು ಮಾಡಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬೆಂಗಳೂರಿನ ಸಮಸ್ಯೆಗಳನ್ನ ಪರಿಹರಿಸೋವರೆಗೂ ನಾನು ವಿರಮಿಸೋದಿಲ್ಲ: ಡಿಕೆಶಿ
Advertisement
ಮಾರುಕಟ್ಟೆ ಮತ್ತು ಜಾಗತಿಕ ರಾಜಕಾರಣ ಎರಡೂ ಈಗ ಭಾರತಕ್ಕೆ ಅನುಕೂಲಕರವಾಗಿದ್ದು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗ ನಮ್ಮ ಸಮಯ ಕೂಡಿಬಂದಿದೆ. ಕಳೆದ 15 ವರ್ಷಗಳಲ್ಲಿ ಭಾರತವು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನ ಶಕ್ತಿ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗಮನಾರ್ಹವಾಗಿ ಸುಧಾರಿಸಿಕೊಂಡಿದೆ. ಈಗ ಇದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಸೂರಜ್ ರಂಗರಾಜನ್ ಹೇಳಿದರು.
Advertisement
ಮೈಕ್ರಾನ್ ಟೆಕ್ನಾಲಜಿಯ ಹಿರಿಯ ನಿರ್ದೇಶಕ ಗೋಕುಲಕುಮಾರ್ ಮಾತನಾಡಿ, ಭಾರತವು ಈಗಾಗಲೇ ಸೆಮಿಕಂಡಕ್ಟರ್ ಉತ್ಪಾದನೆಗೆ ಧುಮುಕಿದೆ. ಇನ್ಮುಂದೆ ಇದಕ್ಕೆ ತಕ್ಕ ಉತ್ತೇಜನ ಕೊಡುವುದು ಆಗತ್ಯವಾಗಿದೆ. ಇದು ಸಾಧ್ಯವಾಗಬೇಕು ಎಂದರೆ, ದೇಶದಲ್ಲಿ ಇರುವ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು ದಕ್ಷವಾದ ಮೂಲಸೌಕರ್ಯವನ್ನು ಸೃಷ್ಟಿಸಬೇಕು. ಭಾರತಕ್ಕೆ ಇದನ್ನು ಸಾಧಿಸುವ ಶಕ್ತಿ ಇದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಕರ್ನಾಟಕ ದೇಶದ ತಂತ್ರಜ್ಞಾನ ವಲಯದ ಹೃದಯ ಬಡಿತ: ಡಿಕೆಶಿ
ಸಿ.ಜಿ.ಸೆಮಿ ಪ್ರೈವೇಟ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಜೆರ್ರಿ ಅರುಕಾನ್ ಆಗ್ನೇಸ್ ಅವರು, ಸೆಮಿಕಂಡಕ್ಟರ್ ಕ್ಷೇತ್ರವು ವಾಣಿಜ್ಯಿಕ ಯಶಸ್ಸನ್ನು ಕಾಣಬೇಕೆಂದರೆ ಗುಣಮಟ್ಟ, ಭದ್ರತೆ ಮತ್ತು ಸರಿಯಾದ ಸಂವಹನಗಳು ನಿರ್ಣಾಯಕವಾಗಿವೆ ಎಂದು ನುಡಿದರು. ಇದನ್ನೂ ಓದಿ: ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ-ಐಸಿಯುಗಳತ್ತ ಚಿತ್ತ: ದಿನೇಶ್ ಗುಂಡೂರಾವ್
ಏಕಗವಾಕ್ಷಿ ವ್ಯವಸ್ಥೆ ಬರಬೇಕು:
ಗೋಷ್ಠಿಯನ್ನು ನಿರ್ವಹಿಸಿದ ಲ್ಯಾಮ್ ರೀಸರ್ಚ್ನ ಉಪಾಧ್ಯಕ್ಷ ರಂಗೇಶ್ ರಾಘವನ್, ʻಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಒಳ್ಳೆಯ ನೀತಿಗಳಿವೆ. ಆದ್ರೆ ಖಾಸಗಿ ಉದ್ಯಮಿಗಳು ನಿಜಕ್ಕೂ ಏನು ಮಾಡುತ್ತಿದ್ದಾರೆ ಎನ್ನುವ ತಿಳಿವಳಿಕೆ ಸ್ಥಳೀಯ ಮಟ್ಟದಲ್ಲಿ ಹಲವು ಇಲಾಖೆಗಳಿಗೆ ಇರುವುದಿಲ್ಲ. ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಸಾಕಷ್ಟನ್ನು ಮಾತನಾಡಲಾಗುತ್ತಿದೆ. ಆದರೆ ಒಂದು ಗವಾಕ್ಷಿಯ ಹಿಂದೆ ಇನ್ನೂ 27 ಗವಾಕ್ಷಿಗಳಿವೆ. ಇದು ಉದ್ಯಮಿಗಳು ಎದುರಿಸುತ್ತಿರುವ ವಾಸ್ತವವಾಗಿದೆ. ನಿಜವಾದ ಅರ್ಥದಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದರು.