ಚೆನ್ನೈ: ದೇವಸ್ಥಾನದ ರಥೋತ್ಸವದ ವೇಳೆ ವಿದ್ಯುತ್ ತಗುಲಿ 11 ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಾಂಜಾವೂರಿನಲ್ಲಿ ನಡೆದಿದೆ.
ಬುಧವಾರ ಮುಂಜಾನೆ ತಮಿಳುನಾಡಿನ ತಾಂಜಾವೂರು ಜಿಲ್ಲೆಯ ಕಾಳಿಮೇಡು ಗ್ರಾಮದ ಅಪ್ಪರ್ ದೇವಸ್ಥಾನವೊಂದರಲ್ಲಿ ರಥೋತ್ಸವ ನಡೆಯುತ್ತಿತ್ತು. ಈ ವೇಳೆ ಪಲ್ಲಕ್ಕಿಗೆ ವಿದ್ಯುತ್ ಲೈನ್ ತಗುಲಿದೆ. ಈ ವೇಳೆ ಆ ಲೈನ್‌ನಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರಸರಣವಾಗುತ್ತಿತ್ತು.
Advertisement
#WATCH | At least 10 people died after a temple car (of chariot festival) came in contact with a live wire in the Thanjavur district in Tamil Nadu pic.twitter.com/F4EdBYb1gV
— ANI (@ANI) April 27, 2022
ರಥಕ್ಕೆ ಹೈವೋಲ್ಟೇಜ್ ಇರುವ ಲೈನ್ ತಗುಲಿದ ಪರಿಣಾಮವಾಗಿ, ರಥದ ಮೇಲೆ ನಿಂತಿದ್ದ ಜನರಿಗೆ ವಿದ್ಯುತ್ ತಗಲಿದ್ದು, ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದು, 15 ಮಂದಿಗೆ ಗಂಭೀರ ಗಾಯಗಳಾಗಿವೆ. ಅಷ್ಟೇ ಅಲ್ಲದೇ ರಥವು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇದನ್ನೂ ಓದಿ: ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ
Advertisement
Advertisement
ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಂಜಾವೂರು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನ ವಾರ್ಷಿಕ ರಥೋತ್ಸವದ ಅಂಗವಾಗಿ ಈ ಮೆರವಣಿಗೆ ನಡೆಯುತ್ತಿತ್ತು. ಇದನ್ನೂ ಓದಿ: ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ಮೋದಿ ʻಕೋವಿಡ್ʼ ಸಭೆ