ವಿದ್ಯುತ್ ಸ್ಪರ್ಶಿಸಿ 11 ತಿಂಗಳ ಮಗು ಸಾವು

Public TV
0 Min Read
baby pic

ಚಾಮರಾಜನಗರ: ವಿದ್ಯುತ್ ಸ್ಪರ್ಶಿಸಿ 11 ತಿಂಗಳ ಗಂಡು ಮಗು ಸಾವನ್ನಪ್ಪಿದ್ದು, ಮಗುವನ್ನು ರಕ್ಷಿಸಲು ಹೋದ ತಾಯಿ ಅಸ್ವಸ್ಥಗೊಂಡಿರುವ ಘಟನೆ ನಗರದ ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದಿದೆ.

Electricity 1

ನೆಲದ ಮೇಲೆ ಇಟ್ಟಿದ್ದ ಸ್ವಿಚ್ ಬೋರ್ಡ್‍ಗೆ ಆಟವಾಡುತ್ತಾ ಕೈ ಹಾಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ವೇಳೆ ಮಗು ರಕ್ಷಿಸಲು ಹೋದ ತಾಯಿ ಲಕ್ಷ್ಮೀ ಕೂಡಾ ವಿದ್ಯುತ್ ಶಾಕ್‍ನಿಂದ ಅಸ್ವಸ್ಥಗೊಂಡಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

Police Jeep

ಮಹಿಳೆಯು ಯಳಂದೂರಿನ ಹೊಸಕೇರಿ ನಿವಾಸಿಯಾಗಿದ್ದು, ಸಹೋದರಿ ಮಗುವಿನ ಹುಟ್ಟುಹಬ್ಬಕ್ಕೆ ತನ್ನ ಮಗುವಿನೊಂದಿಗೆ ತವರಿಗೆ ಬಂದಿದ್ದರು. ಇದನ್ನೂ ಓದಿ: ಅಭಿಮಾನಿ ಮಗುವಿಗೆ ತಮ್ಮದೇ ಹೆಸರನ್ನಿಟ್ಟ ಸಿದ್ದರಾಮಯ್ಯ

Share This Article
Leave a Comment

Leave a Reply

Your email address will not be published. Required fields are marked *