ಕೋಲಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿ ಕೆರೆ ಕುಂಟೆಗಳೆಲ್ಲಾ ತುಂಬಿದೆ. ಈ ಮಧ್ಯೆ ಕೆರೆಗಳಲ್ಲಿರುವ (lake) ವಿದ್ಯುತ್ (Electricity) ಕಂಬಗಳ ದುರಸ್ತಿಗೆ ಬೆಸ್ಕಾಂ (BESCOM) ನೌಕರರು ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೋಲಾರ (Kolara) ಜಿಲ್ಲೆಯ ಮಾಲೂರು ತಾಲೂಕು ಲಕ್ಕೂರು ಕೆರೆಯಲ್ಲಿ ಮಾಲೂರು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ದುರಸ್ತಿಗಾಗಿ ತೆಪ್ಪದಲ್ಲಿ ತೆರಳಿ ಕೆಲಸ ನಿರ್ವಹಿಸಿದ್ದಾರೆ. ವಿದ್ಯುತ್ ಕಂಬಗಳ ದುರಸ್ತಿಗಾಗಿ ಬೆಸ್ಕಾಂ ನೌಕರರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಈ ಮೂಲಕ ಜನರಿಗೆ ಬೆಳಕಾಗಿದ್ದು, ತೆಪ್ಪದಲ್ಲಿ ತೆರಳಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡಿರುವ ಬೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಕಾವಾಡಿಗ ಕಲೀಲ್‍ನನ್ನು ಅಟ್ಟಾಡಿಸಿದ ಸಾಕಾನೆ ಮಣಿಕಂಠ
ಇಬ್ಬರು ತೆಪ್ಪದಲ್ಲಿದ್ದರೆ ಇನ್ನಿಬ್ಬರು ವಿದ್ಯುತ್ ಕಂಬದಲ್ಲಿ ಕೆಲಸ ಮಾಡುವ ಮೂಲಕ ಬೆಸ್ಕಾಂ ಸಿಬ್ಬಂದಿಯ ಸಾಹಸ ಕಾರ್ಯಕ್ಕೆ ವಿದ್ಯುತ್ ನಿಗಮ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ