ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯಾಗಿದೆ.
ಈ ಹಿಂದೆ ವಿದ್ಯುತ್ ದರ ಏರಿಕೆ ಸಂಬಂಧ ಐದು ವಿದ್ಯುತ್ ಸರಬರಾಜು ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ(ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಕೆಇಆರ್‌ಸಿ ಪ್ರತಿ ಯೂನಿಟ್ ವಿದ್ಯುತ್‍ಗೆ 33 ಪೈಸೆ ಹೆಚ್ಚಳ ಮಾಡಿದೆ. ಕೆಇಆರ್‌ಸಿ ಅಧ್ಯಕ್ಷ ಶಂಭುದಯಾಳ್ ಮೀನಾ ಸುದ್ದಿಗೋಷ್ಠಿ ನಡೆಸಿ ಬೆಲೆ ಏರಿಕೆಯ ನಿರ್ಧಾರವನ್ನು ಪ್ರಕಟಿಸಿದರು.
Advertisement
Advertisement
ಪ್ರತಿ ವರ್ಷ ಏಪ್ರಿಲ್ 1 ರಿಂದ ನೂತನ ದರ ಜಾರಿಗೆ ಬರುತಿತ್ತು. ಲೋಕಸಭಾ ಚುನಾವಣೆ ಇದ್ದಿದ್ದರಿಂದ ದರ ಏರಿಕೆ ವಿಳಂಬವಾಗಿತ್ತು. ಆದರೆ ಈ ಬಾರಿ ಪರಿಷ್ಕೃತ ದರವನ್ನು ಏಪ್ರಿಲ್‍ನಿಂದಲೇ ಪೂರ್ವಾನ್ವಯವಾಗಲಿದೆ ಎಂದು ಕೆಇಆರ್‌ಸಿ ತಿಳಿಸಿದೆ.
Advertisement
ಪ್ರತಿ ಯೂನಿಟ್ ಗೆ 1.20 ರೂ ಏರಿಕೆಯಾಗಿದ್ದು, ಶೇ. 17.37 ರಷ್ಟು ವಿದ್ಯುತ್ ದರ ಹೆಚ್ಚಳವಾಗಲಿದೆ. ಆದರೆ ಮೆಟ್ರೋಗೆ ಕೆಇಆರ್‌ಸಿ ಬಂಪರ್ ಕೊಡುಗೆ ನೀಡಿದ್ದು, ಮೆಟ್ರೋಗೆ ಮಾತ್ರ ಪ್ರತಿ ಯೂನಿಟ್‍ಗೆ 5.20 ರೂಪಾಯಿ ರಿಯಾಯಿತಿ ನೀಡಿದೆ.
Advertisement
ಬೆಂಗಳೂರು ವಿದ್ಯುತ್ ಗ್ರಾಹಕರಿಗೆ ಆರು ಸ್ಲ್ಯಾಬ್‍ನಲ್ಲಿ ಏರಿಕೆಯಾಗುತ್ತಿದ್ದ ವಿದ್ಯುತ್ ದರವನ್ನ ನಾಲ್ಕು ಸ್ಲ್ಯಾಬ್‍ಗೆ ಇಳಿಸಲಾಗಿದೆ. ಬೆಂಗಳೂರಿಗರಿಗೆ ಗೃಹ ಬಳಕೆ ವಿದ್ಯುತ್ ಮೇಲೆ ಪ್ರತಿ ಯೂನಿಟ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದೆ.
ಬೆಸ್ಕಾಂ(ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಮೆಸ್ಕಾಂ(ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಚೆಸ್ಕಾಂ(ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಹೆಸ್ಕಾಂ(ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಜೆಸ್ಕಾಂ(ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್) ವಿದ್ಯುತ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು.
ಬೆಸ್ಕಾಂ ಪ್ರತಿ ಯೂನಿಟ್ ಗೆ 1 ರೂ. 1 ಪೈಸೆ, ಮೆಸ್ಕಾಂ 1 ರೂ. 38 ಪೈಸೆ, ಚೆಸ್ಕಾಂ 1 ರೂ., ಹೆಸ್ಕಾಂ 1 ರೂ 67 ಪೈಸೆ, ಜೆಸ್ಕಾಂ 1 ರೂ 27 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೆಇಎಆರ್‍ಸಿ ಈ ಎಲ್ಲಾ ಕಂಪನಿಗಳಿಗೂ ಪ್ರತಿ ಯೂನಿಟ್‍ಗೆ 33 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಿದೆ.
ಸಿಲಿಕಾನ್ ಸಿಟಿಯಲ್ಲಿ ಆಗುತ್ತಿರುವ ವಿದ್ಯುತ್ ಅವಘಡಕ್ಕೆ ಕೆಇಆರ್‌ಸಿ ಬೆಸ್ಕಾಂ ವಿರುದ್ಧ ಗರಂ ಆಗಿದೆ. ಸೋಮವಾರ ಎಂಡಿ ಹಾಗೂ ಅಧಿಕಾರಿಗಳ ಸಭೆ ಕರೆಯಲಿದ್ದೇವೆ. ವಿದ್ಯುತ್ ಅವಘಡದ ಬಗ್ಗೆ ಸಾಕಷ್ಟು ವರದಿ ಬರುತ್ತಿದೆ. ಅಲ್ಲದೇ ಹೈಟೆನ್ಶನ್ ವೈರ್ ಮನೆಯ ಮೇಲೆ ಹಾದು ಹೋಗಬಾರದು ಅನ್ನುವ ಕಾಯ್ದೆ ಇದೆ. ಇದರ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಮಾಡಲಿದ್ದೇವೆ. ಬೆಸ್ಕಾಂ ಸೇರಿದಂತೆ ಐದು ಎಸ್ಕಾಂಗಳಿಗೂ ಸಭೆ ಕರೆದು ಸೂಚನೆ ನೀಡಲಾಗುತ್ತೆ ಎಂದು ಕೆಇಆರ್‌ಸಿ ಅಧ್ಯಕ್ಷ ಶಂಭುದಯಾಳ್ ತಿಳಿಸಿದ್ದಾರೆ.