ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ – ಫಿಕ್ಸೆಡ್ ಚಾರ್ಜ್ ದರ 25 ರೂ. ಏರಿಕೆ

Public TV
1 Min Read
Electricity 1

ಬೆಂಗಳೂರು: ಕಳೆದ ವಾರ ಇಂಧನ ಇಲಾಖೆಯ ಸಿಬ್ಬಂದಿ ಪಿಂಚಣಿ ಗ್ರಾಚ್ಯುಟಿಯನ್ನು ಸರ್ಕಾರ ಪಾವತಿ ಮಾಡದೇ ಇರೋದಕ್ಕೆ ಗ್ರಾಹಕರಿಗೆ 36 ಪೈಸೆಯಂತೆ ಪ್ರತಿ ಯೂನಿಟ್‌ಗೆ ಕೆಇಆರ್‌ಸಿ ದರ ಏರಿಕೆ ಬರೆ ಹಾಕಿತ್ತು. ಇದರ ಬೆನ್ನಲ್ಲೇ ಇಂದು ವಾರ್ಷಿಕ ವಿದ್ಯುತ್ ದರ ಏರಿಕೆ ಆದೇಶ ಹೊರಡಿಸಿದೆ. ವಿದ್ಯುತ್ ಶುಲ್ಕ ಇಳಿಸಿ ನಿಗದಿತ ಶುಲ್ಕ ಏರಿಸಿ ಗ್ರಾಹಕರಿಗೆ ಮತ್ತೊಂದು ಶಾಕ್ ಕೊಟ್ಟಿದೆ. ‌

ಏನಿದೆ ಆದೇಶದಲ್ಲಿ?
* ಇದುವರೆಗೆ ಗೃಹಬಳಕೆ ನಿಗದಿತ 120 ರೂ. ಇತ್ತು. ಇನ್ಮುಂದೆ 145 ರೂ.ಗೆ ಜಂಪ್ ಆಗಲಿದೆ. ಅಂದರೆ, 25 ರೂ. ಏರಿಕೆಯಾಗಿದೆ.
* ಬೃಹತ್ ಕೈಗಾರಿಕೆ ವಾಣಿಜ್ಯ ಉದ್ದೇಶದ ವಿದ್ಯುತ್ ಬಳಕೆಯ ಮೇಲಿದ್ದ ಡಿಮ್ಯಾಂಡ್ ಚಾರ್ಜ್ 340 ರೂ.ನಿಂದ 345 ರೂ.ಗೆ ಏರಿಕೆಯಾಗಿದೆ.
* ಎಲ್-ಟಿ- ಸಣ್ಣ ಕೈಗಾರಿಕೆಗೆ 140 ರೂ. ಇದ್ದಿದ್ದು -150 ರೂ.ಗೆ ಡಿಮ್ಯಾಂಡ್ ಚಾರ್ಜ್ ಏರಿಕೆಯಾಗಿದೆ.  ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ

current bill bengaluru

ಇಳಿಕೆ ಏನು?
* ಗೃಹಬಳಕೆಯ ವಿದ್ಯುತ್‌ಗೆ 2025-26ರಲ್ಲಿ 10 ಪೈಸೆ ಹಾಗೂ 2027-28ಕ್ಕೆ 5 ಪೈಸೆ ಕಡಿತ
*ಹೆಚ್‌ಟಿ ವಾಣಿಜ್ಯದಲ್ಲಿ ಮಾಲ್ ಹಾಗೂ 5ಸ್ಟಾರ್ ಹೋಟೆಲ್‌ಗಳಿಗೆ ಪ್ರತಿ ಯೂನಿಟ್‌ನಲ್ಲಿ 205 ಪೈಸೆಗಳಷ್ಟು ಕಡಿತ
* ಇವಿ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪ್ರತಿ ಯೂನಿಟ್‌ಗೆ 4.50 ರಷ್ಟು ಕಡಿಮೆ ದರದಲ್ಲಿ ಮುಂದುವರಿಕೆ
ಇದನ್ನೂ ಓದಿ: ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?

ಸೋಲಾರ್ ಅಳವಡಿಕೆಗೆ ಪ್ರೋತ್ಸಾಹ
ಸೋಲಾರ್ ಅಳವಡಿಸಿಕೊಂಡ ಗೃಹಬಳಕೆಯ ಗ್ರಾಹಕರಿಗೆ 10 ಕಿಲೋವ್ಯಾಟ್ ವರೆಗೆ ಅನ್ವಯವಾಗುವಂತೆ ಪ್ರತಿ ಕಿಲೋ ವ್ಯಾಟ್‌ಗೆ 25 ರೂಪಾಯಿ ರಿಯಾಯಿತಿ.

Share This Article