ಬೆಂಗಳೂರು: ಇದು ಸಂಕ್ರಾಂತಿ ಸುಗ್ಗಿ ಕಾಲ. ಅದೇ ರೀತಿ, ಚುನಾವಣೆಗೆ ರಾಜಕೀಯ ಪಕ್ಷಗಳು ಉಚಿತ ಘೋಷಣೆಗಳ ಸುಗ್ಗಿಯೂ ಆಗುತ್ತಿದೆ. ಆಶ್ವಾಸನೆಗಳು, ಭರವಸೆಗಳ ಮಹಾಪೂರದೊಂದಿಗೆ ಬಿಜೆಪಿ-ಕಾಂಗ್ರೆಸ್- ಜೆಡಿಎಸ್ ಮೂರೂ ಪಕ್ಷಗಳು ಮತಬೇಟೆಗೆ ಮುಂದಾಗಿವೆ. ಅದರಲ್ಲೂ ಮಹಿಳಾ ಓಟ್‍ಗಳ ಮೇಲೆ ಕಣ್ಣಿಟ್ಟಿದ್ದು ಒಂದೊಂದು ಪಕ್ಷ ಒಂದೊಂದು ಘೋಷಣೆ ಮಾಡುತ್ತಿವೆ. ಅದರಲ್ಲೂ ಕಾಂಗ್ರೆಸ್ `ಗ್ಯಾರೆಂಟಿ’ ಹೆಸರಿನಲ್ಲಿ ಭರವಸೆಗಳನ್ನು ಘೋಷಿಸುತ್ತಿವೆ.
Advertisement
ಕಾಂಗ್ರೆಸ್ ಗ್ಯಾರೆಂಟಿ ನಂ.1 ಯೋಜನೆಯಾಗಿ 200 ಯೂನಿಟ್ ಉಚಿತ ವಿದ್ಯುತ್ (200 Units Free Electricity) ಎಂದು ಘೋಷಿಸಿತ್ತು. ಈಗ ಪ್ರಿಯಾಂಕಾ ಗಾಂಧಿ ಮೂಲಕ ಗ್ಯಾರೆಂಟಿ ನಂ.2 ಗೃಹಲಕ್ಷಿ ಬಾಂಡ್ (Monthly Rs 2,000 for female head of every household) ಘೋಷಿಸಿದೆ. ಅರಮನೆ ಮೈದಾನದಲ್ಲಿ ನಡೆದ `ನಾ ನಾಯಕಿ’ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಗೃಹ ಲಕ್ಷ್ಮಿ (Grahlaxmi) ಬಾಂಡ್ ಪ್ರದರ್ಶಿಸಿದರು.
Advertisement
ಬೆಲೆ ಏರಿಕೆಯಿಂದ ದಿಕ್ಕೆಟ್ಟ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಕೊಡುತ್ತವೆ ಎಂದು ಚೆಕ್ ಮಾದರಿಯ ಬಾಂಡನ್ನು ಪ್ರಿಯಾಂಕಾ ಗಾಂಧಿ ಪ್ರದರ್ಶಿಸಿದರು. ಈ ಚೆಕ್‍ಗೆ ಸಿದ್ದರಾಮಯ್ಯ, ಡಿಕೆಶಿ ಸಹಿ ಹಾಕಿ ನಮ್ಮ ಸರ್ಕಾರ ಬಂದರೆ ಹೀಗೆ ಚೆಕ್ ಹಾಕಿ ಕೊಡುತ್ತೇವೆ ಎಂದು ತೋರಿಸಿದರು. ಇದನ್ನೂ ಓದಿ: ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ
Advertisement
Advertisement
ಎಷ್ಟು ಹಣ ಬೇಕು?
ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ವರ್ಷಕ್ಕೆ ವಾರ್ಷಿಕ 24,000 ರೂಪಾಯಿ ನೀಡಲಾಗುತ್ತದೆ. ಕಾಂಗ್ರೆಸ್ ಯೋಜನೆ ಜಾರಿಯಾದರೆ ತಿಂಗಳಿಗೆ 3,000 ಕೋಟಿ ರೂ., ವಾರ್ಷಿಕ 36,000 ಕೋಟಿ ರೂ. ಆಗುತ್ತದೆ.
ಈಗಾಗಲೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಇದೂ ಜಾರಿಯಾದ್ರೆ ವಾರ್ಷಿಕ 9,000 ಕೋಟಿ ರೂ. ಬೇಕಾಗುತ್ತದೆ. ಎರಡೂ ಜಾರಿಯಾದರೆ ವಾರ್ಷಿಕ 45,000 ಕೋಟಿ ರೂ. ವೆಚ್ಚ ಆಗುತ್ತದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k