– ಮೈಸೂರಲ್ಲಿ ಗೃಹಪ್ರವೇಶಕ್ಕೆ ರೆಡಿಯಾಗಿದೆ ಸಿದ್ದರಾಮಯ್ಯ ಮನೆ
ಮೈಸೂರು: ಡಿಸೆಂಬರ್‌ನಲ್ಲಿ ಮೈಸೂರಿನಲ್ಲಿ (Mysuru) ಮನೆ ಗೃಹ ಪ್ರವೇಶಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಸಿದ್ಧರಾಗಿದ್ದಾರೆ. ಆದರೆ, ಸಿಎಂ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ.

ಮೈಸೂರಿನ ಕುವೆಂಪು ನಗರದಲ್ಲಿ 80 & 120 ಅಳತೆಯಲ್ಲಿ ಮನೆಯನ್ನು ಸಿಎಂ ಕಟ್ಟಿಸಿದ್ದಾರೆ. ಮನೆಯ ಕೆಲಸ ಮುಗಿದಿದೆ. ಆದರೆ, ಹೊಸ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಮಾತ್ರ ಸಿಗುತ್ತಿಲ್ಲ. ವಿದ್ಯುತ್ ಸಂಪರ್ಕ ಸಿಗದೆ ಗೃಹಪ್ರವೇಶ ಮಾಡಲು ಆಗಲ್ಲ. ಗೃಹ ಪ್ರವೇಶ ಮಾಡಿದರೂ ಮನೆಯಲ್ಲಿ ವಾಸಿಸಲು ಆಗಲ್ಲ. ಇದನ್ನೂ ಓದಿ: ಕೊಲೆಯತ್ನ ಆರೋಪ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್
ಹೀಗಾಗಿ, ಸಿಎಂಗೆ ಸಮಸ್ಯೆ ಎದುರಾಗಿದೆ. ಹೊಸ ಮನೆ ವಿದ್ಯುತ್ ಸಂಪರ್ಕಕ್ಕೆ ಈಗ ಓಸಿ ಅಂದರೆ ಸ್ವಾಧೀನಾನುಭವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಈ ಪತ್ರವನ್ನು ಸಿಎಂ ಸಲ್ಲಿಸದ ಕಾರಣ ವಿದ್ಯುತ್ ನಿಗಮವು ಸಿಎಂ ಕುಟುಂಬದ ಅರ್ಜಿಯನ್ನು ಪುರಸ್ಕರಿಸಿಲ್ಲ.

