Bengaluru CityKarnatakaLatestMain Post

ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್?

ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆಯ ಸುಳಿವನ್ನು ಇಂಧನ ಸಚಿವ ಸುನಿಲ್ ಕುಮಾರ್ ಕೊಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಶಿಫಾರಸು ಮಾಡಿದರೆ ದರ ಏರಿಕೆ ಮಾಡುವುದು ಅನಿವಾರ್ಯ. ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆ, ಬಿಡಬ್ಲ್ಯೂಎಸ್‍ಎಸ್‍ಬಿ ಸೇರಿ ಬೇರೆ ಬೇರೆ ಇಲಾಖೆಗಳಿಂದ 12 ಸಾವಿರ ಕೋಟಿಯಷ್ಟು ಹಣ ಬಾಕಿ ಬರಬೇಕಿದೆ. ಹೀಗಾಗಿ ವಿದ್ಯುತ್ ದರ ಏರಿಕೆ ಮಾಡುವುದು ಅನಿವಾರ್ಯ. ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಮೊದಲು ದರ ಏರಿಕೆ ಬಗ್ಗೆ ಶಿಫಾರಸು ಮಾಡಲಿ, ನಂತ್ರ ಅದನ್ನು ಪರಿಶೀಲಿಸಿ ವಿದ್ಯುತ್ ದರ ಎಷ್ಟು ಏರಿಕೆ ಮಾಡ್ಬೇಕು ಅಂತಾ ನಿರ್ಧರಿಸುತ್ತೇವೆ ಎಂದರು. ಇದನ್ನೂ ಓದಿ: ವೀಕೆಂಡ್‌ ಕರ್ಫ್ಯೂ ರದ್ದು : ಸಿಎಂ ಕೋವಿಡ್‌ ಸಭೆಯ ಇನ್‌ಸೈಡ್‌ ಸ್ಟೋರಿ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ವಿಚಾರವಾಗಿ ಮಾತನಾಡಿ, ಮುಂದಿನ ವಾರ ದೆಹಲಿಗೆ ಭೇಟಿ ನೀಡುತ್ತೇನೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಬಳಿಕ ಅನುದಾನ ಬಿಡುಗಡೆ ಸರಿಯಾಗಿ ಆಗಿಲ್ಲ. ಈ ಬಗ್ಗೆ ಕೇಂದ್ರದ ಬಳಿ ಚರ್ಚಿಸಿ ಅನುದಾನ ದೊರಕಿಸಲು ಪ್ರಯತ್ನ ಪಡುತ್ತೇನೆ. ಇದೇ ವೇಳೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ಒತ್ತಾಯಿಸ್ತೇನೆ. ಕನ್ನಡಕ್ಕೆ ಹೆಚ್ಚು ಆದ್ಯತೆ ಅನುದಾನ ಸಿಗಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕೊರೊನಾ ರಾಜ್ಯದಲ್ಲಿ ಏರಿಕೆ , ಬೆಂಗ್ಳೂರಲ್ಲಿ ಇಳಿಕೆ – ಒಟ್ಟು 48,049 ಕೇಸ್, 22 ಸಾವು

ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ವಿರೋಧ ವಿಚಾರವಾಗಿ ಮಾತನಾಡಿ, ಸಂಸ್ಕೃತ ಭಾಷೆಗೆ ವಿರೋಧ ಮಾಡುವುದಿಲ್ಲ. ಸಂಸ್ಕೃತ ಭಾಷೆ ಎಲ್ಲದಕ್ಕೂ ತಾಯಿ ಸ್ಥಾನದಂತಿದೆ. ಸಂಸ್ಕ್ರತ ಹಳೆಯ ಭಾಷೆ. ಕನ್ನಡಕ್ಕೆ ಕನ್ನಡ ವಿವಿಗೆ ಹೆಚ್ಚಿನ ಅನುದಾನ ನೀಡಬೇಕು. ಇದು ದಾಖಲೆ ವಿಚಾರ ಅಲ್ಲ, ಅದಕ್ಕೆ ಆರ್.ಟಿ.ಸಿ ಕೊಡಿ ಪಹಣಿ ಕೊಡಿ ಅಂದ್ರೆ ಆಗಲ್ಲ. ಆದ್ರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು, ಕೊಡಲೇಬೇಕು. ಮುಂದಿನ ಬಜೆಟ್ ನಲ್ಲಿ ಕನ್ನಡಕ್ಕೆ ಹೆಚ್ಚಿನ ಅನುದಾನ ನೀಡುವ ಕೆಲಸ ಸರ್ಕಾರ ಮಾಡಲಿದೆ ಎಂದು ನುಡಿದರು.

Leave a Reply

Your email address will not be published.

Back to top button