ಚೆನ್ನೈ: ಎಲೆಕ್ಟ್ರಿಷಿಯನ್ (Electrician) ಕೆಲಸ ಮಾಡುತ್ತಿದ್ದ ವೇಳೆ ನಟ್ ನುಂಗಿದ್ದ 55 ವರ್ಷದ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ನೆಟ್ ಅನ್ನು ಆತನ ದೇಹದಿಂದ ವೈದ್ಯರು ಹೊರ ತೆಗೆದಿದ್ದಾರೆ.
ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿಯನ್ನು ಕೊಯಮತ್ತೂರಿನ (Coimbatore) ನಿವಾಸಿ ಸಂಸುದ್ದೀನ್ ಎಂದು ಗುರುತಿಸಲಾಗಿದ್ದು, ಇವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅಕ್ಟೋಬರ್ 18ರಂದು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನಟ್ ಅನ್ನು ನುಂಗಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ
ಈ ವೇಳೆ ತಕ್ಷಣ ಕೆಮ್ಮಲು ಪ್ರಯತ್ನಿಸಿದ್ದಾರೆ. ಆದರೆ ನಟ್‍ನಿಂದ ಅವರಿಗೆ ಉಸಿರುಗಟ್ಟಲು ಪ್ರಾರಂಭಿಸಿತು. ಹೀಗಾಗಿ ಅವರನ್ನು ಕೂಡಲೇ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ ವ್ಯಕ್ತಿಯನ್ನು ಕರೆದೊಯ್ದು ಎಕ್ಸ್-ರೇ ನಡೆಸಲಾಯಿತು. ಈ ವೇಳೆ ನಟ್ ಶ್ವಾಸನಾಳದಲ್ಲಿ ಸೇರಿಕೊಂಡು ಎಡ ಶ್ವಾಸಕೋಶದ ಕಡೆಗೆ ಹೋಗುತ್ತಿರುವುದು ವೈದ್ಯರಿಗೆ ತಿಳಿದುಬಂದಿದೆ.
ಬಳಿಕ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಶರವಣನ್, ಅಲಿಸುಲ್ತಾನ್, ಮಣಿಮೋಳಿ, ಸೆಲ್ವನ್ ಮತ್ತು ಮದನಗೋಪಾಲನ್ ಅವರನ್ನೊಳಗೊಂಡ ವೈದ್ಯರ ತಂಡ ಎಂಡೋಟ್ರಾಶಿಯಲ್ ಉಪಕರಣವನ್ನು ಬಳಸಿ ಸಂಸುದ್ದೀನ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ನಟ್ ಅನ್ನು ಹೊರತೆಗೆದು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇದನ್ನೂ ಓದಿ: ಉಡುಗೊರೆ ಮಾರಾಟ – ಪಾಕ್ ಚುನಾವಣಾ ಆಯೋಗದಿಂದ ಇಮ್ರಾನ್ ಖಾನ್ ಅನರ್ಹ