ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ (Electric Short Circuit) ಕಿರಾಣಿ ಅಂಗಡಿಗೆ ಬೆಂಕಿ (Fire) ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಗರದ ಬೆಟಗೇರಿ (Betageri) ಟೆಂಗಿನಕಾಯಿ ಬಜಾರ್‌ನಲ್ಲಿ ನಡೆದಿದೆ.
ಬೆಟಗೇರಿ ತಿಪ್ಪಣಸಾ ಅರವಟಗಿ ಎಂಬುವರಿಗೆ ಸಂಬಂಧಿಸಿದ ಕಿರಾಣಿ ಅಂಗಡಿ ಬೆಂಕಿಗಾಹುತಿಯಾಗಿದೆ. ದೊಡ್ಡ ಪ್ರಮಾಣ ಕಿರಾಣಿ ಅಂಗಡಿ ಇದಾಗಿತ್ತು. ಲಕ್ಷಾಂತರ ರೂಪಾಯಿ ನಗದು ಹಣ ಹಾಗೂ ಕಿರಾಣಿ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಇದನ್ನೂ ಓದಿ: ಭಾನುವಾರ ಕೇಂದ್ರ ಬಜೆಟ್ ಮಂಡಿಸ್ತಾರಾ ನಿರ್ಮಲಾ ಸೀತಾರಾಮನ್?
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ದೌಡಾಯಿಸಿದರು. ನಂತರ ಸ್ಥಳಿಯರ ಸಹಾಯದಿಂದ ಬೆಂಕಿ ನಂದಿಸಲು ಕೆಲಕಾಲ ಹರಸಾಹಸ ಪಡಬೇಕಾಯಿತು. ಸದ್ಯಕ್ಕೆ ನಷ್ಟವಾದ ವಸ್ತುಗಳ ನಿಖರ ಮೌಲ್ಯ ತಿಳಿದು ಬಂದಿಲ್ಲ. ಈ ಕುರಿತು ಗದಗನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

