ಬಳ್ಳಾರಿ: ಕಳೆದ 1 ತಿಂಗಳಿಂದ ನಡೆಯುತ್ತಿರುವ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ (Bharat Jodo Yatra) ಇಂದು ಆಂಧ್ರಪ್ರದೇಶದ ಗಡಿ ತಲುಪಿದೆ. ಮಧ್ಯಾಹ್ನ ಬಳ್ಳಾರಿಯ (Bellary) ಗ್ರಾಮೀಣ ಭಾಗದ ಮೋಕಾ ಗ್ರಾಮಕ್ಕೆ ತಲುಪಿದ್ದು, ಈ ವೇಳೆ ಮೋಕಾವಗ್ರಾದ ಜನರು ರಾಹುಲ್ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.
ರಾಹುಲ್ ಅವರನ್ನು ನೋಡಲು ಅಂಗಡಿ ಬಳಿಯಲ್ಲಿ ಜನರು ನಿಂತಿದ್ದು, ಈ ವೇಳೆ ಕಬ್ಬಿಣದ ರಾಡ್‌ಗೆ ವಿದ್ಯುತ್ ತಂತಿಗೆ ತಾಗಿ, ಸುಮಾರು ಐದು ಜನರಿಗೆ ಶಾಕ್ (Electric Shock) ತಗುಲಿದೆ. ಮೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ದೊಡ್ಡಪ್ಪ ಸಂತೋಷ್ ಸೇರಿದಂತೆ ಐವರಿಗೆ ವಿದ್ಯುತ್ ಶಾಕ್ ತಗುಲಿ ಗಾಯಗಳಾಗಿವೆ. ಇದನ್ನೂ ಓದಿ: ಮತ್ತೆ ಶುರುವಾಯಿತು ಚಾಮರಾಜಪೇಟೆ ಮೈದಾನ ಫೈಟ್ – ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟು
Advertisement
Advertisement
ಘಟನೆ ನಡೆಯುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಸ್ಥಳದಲ್ಲಿ ಹಾಜರಿದ್ದು ಆರೋಗ್ಯ ವಿಚಾರಿಸಿದರು. ಗಾಯಾಳುಗಳನ್ನು ಮೋಕಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲ ಸಮಯದ ನಂತರ ಆಸ್ಪತ್ರೆಗೆ ರಾಗಾ ಭೇಟಿ ನೀಡಿದರು. ಗಾಯಾಳುಗಳ ಸ್ಥಿತಿ ವಿಚಾರಿಸಿ, ಸಾಂತ್ವನ ಹೇಳಿದರು. ಗಾಯಾಳುಗಳಿಗೆ ರಾಹುಲ್ ಗಾಂಧಿ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಮುರುಘಾ ಮಠದ ಪೂಜಾ ಕೈಂಕರ್ಯಕ್ಕೆ ಉಸ್ತುವಾರಿ ನೇಮಕ – ಭುಗಿಲೆದ್ದ ಭಿನ್ನಮತ