ನವದೆಹಲಿ: ಐಟಿ ಕಂಪೆನಿಗಳಿಂದಾಗಿ ಸಾಫ್ಟ್ ವೇರ್ ಎಂಜಿನಿಯರಿಂಗ್ ಓದಿದವರಿಗೆ ಬೇಡಿಕೆ ಈಗ ಹೆಚ್ಚಿದೆ. ಆದರೆ ಈ ಟ್ರೆಂಡ್ ಮುಂದಿನ ದಿನಗಳಲ್ಲಿ ಬದಲಾವಣೆಯಾಗಲಿದ್ದು ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಓದಿದವರಿಗೆ ಬಂಪರ್ ಹೊಡೆಯುವ ಸಾಧ್ಯತೆಯಿದೆ.
ಹೌದು, ಭರತದಲ್ಲಿ ಮುಂದೆ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಆಗಲಿದ್ದು, ಎಲೆಕ್ಟ್ರಿಕ್ ವಾಹನಗಳು ರಸ್ತೆಗೆ ಇಳಿಯಲಿದೆ. ಹೀಗಾಗಿ ಎಲ್ಲ ಆಟೋಮೊಬೈಲ್ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗುತ್ತಿದ್ದು ಈ ಕ್ಷೇತ್ರಕ್ಕೆ ಈಗ ಪ್ರತಿಭಾನ್ವಿತರ ಕೊರತೆ ಉಂಟಾಗಿದೆ. ಇದನ್ನೂ ಓದಿ:ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ಪರ್ಮಿಟ್ ಇಲ್ಲ: ನಿತಿನ್ ಗಡ್ಕರಿ
Advertisement
Advertisement
Advertisement
ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ವಿಭಾಗದಲ್ಲಿ ಈಗ 5 ಸಾವಿರಕ್ಕೂ ಹೆಚ್ಚು ಮಂದಿಯ ಬೇಡಿಕೆ ಇದ್ದು, ಮುಂದಿನ ಎರಡು ವರ್ಷದಲ್ಲಿ ಈ ಸಂಖ್ಯೆ 15 ಸಾವಿರ ತಲುಪುವ ಸಾಧ್ಯತೆಯಿದೆ ಎಂದು ದೇಶದ ದೊಡ್ಡ ಉದ್ಯೋಗ ಪೋರ್ಟಲ್ ಸಂಸ್ಥೆಯಾಗಿರುವ ಟೀಮ್‍ಲೀಸ್ ಅಂದಾಜಿಸಿದೆ.
Advertisement
ಈಗಾಗಲೇ ಭಾರತದಲ್ಲಿ 1 ಸಾವಿರಕ್ಕೂ ಹೆಚ್ಚು ಎಂಜಿನಿಯರ್ ಗಳು ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿ ಪಡಿಸುವ ಸಂಬಂಧ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಟಾಟಾ ಮೋಟಾರ್ಸ್, ಮರ್ಸಿಡಿಸ್ ಬೆಂಜ್, ಮಹೀಂದ್ರಾ, ಮಾರುತಿ ಕಂಪೆನಿಗಳು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ
ಮಹೀಂದ್ರಾ ಮತ್ತು ಮಹೀಂದ್ರಾ ಕಂಪೆನಿಯ ಚೀಫ್ ಪೀಪಲ್ ಆಫೀಸರ್ ರಾಜೇಶ್ವರ್ ತ್ರಿಪಾಠಿ ಪ್ರತಿಕ್ರಿಯಿಸಿ, ಎಲೆಕ್ಟ್ರಿಕ್ ವಾಹನ ಕ್ಷೇತ್ರ ಉದಯೋನ್ಮುಕ ಉದ್ಯಮವಾಗಿದ್ದು, ಪ್ರತಿಭಾನ್ವಿತರನ್ನು ಹುಡುಕುವುದು ಬಹಳ ಸವಾಲಿನ ಕೆಲಸ. ಮುಂದಿನ ದಿನದಲ್ಲಿ ಈ ಕ್ಷೇತ್ರ ಭಾರೀ ಸಂಖ್ಯೆಯ ಉದ್ಯೋಗಿಗಳನ್ನು ಬೇಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗುತ್ತೆ: ಗಡ್ಕರಿ
ಮುಂದಿನ 2 ವರ್ಷದಲ್ಲಿ 15 ಸಾವಿರ ಮಂದಿಯ ಬೇಡಿಕೆಯಿದೆ. ಆದರೆ 10 ಸಾವಿರ ಮಂದಿಯ ಪೂರೈಕೆ ಮಾತ್ರ ಆಗಲಿದೆ. ಸದ್ಯಕ್ಕೆ ಈಗ 1 ಸಾವಿರ ಎಂಜಿನಿಯರ್ ಗಳು ಮಾತ್ರ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಟೋಮೊಬೈಲ್ ಕಂಪೆನಿಗಳು ಈಗಾಗಲೇ ಐಐಟಿ, ಎನ್‍ಐಟಿಕೆ ಮತ್ತು ಕೇಂದ್ರ ಸರ್ಕಾರದ ಅನುದಾನ ಪಡೆಯುವ ಕಾಲೇಜುಗಳಿಗೆ ಭೇಟಿ ನೀಡಿ ಕ್ಯಾಂಪಸ್ ಸೆಲೆಕ್ಷನ್ ಮಾಡುತ್ತಿದೆ ಎಂದು ಟೀಮ್ ಲೀಸ್ ಸಹ ಸಂಸ್ಥಾಪಕ ಋತುಪರ್ಣ ಚಕ್ರವರ್ತಿ ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv