– ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಚಿಕ್ಕಮಗಳೂರು: ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ ಹೊಡೆದು (Electric Shock), 20 ಅಡಿ ಎತ್ತರದ ಕಂಬದಿಂದ ಲೈನ್ ಮ್ಯಾನ್ ಬಿದ್ದು ಗಾಯಗೊಂಡ ಘಟನೆ ಮೂಡಿಗೆರೆ (Mudigere) ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ಲೈನ್ ಮ್ಯಾನ್‍ನ್ನು ಬಳ್ಳಾರಿ (Ballari) ಮೂಲದ ಪ್ರಕಾಶ್ ಎಂದು ಗುರುತಿಸಲಾಗಿದೆ. ಪ್ರಕಾಶ್ ಅವರು ಕಂಬದಿಂದ ಬೀಳುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಂಬ ಹತ್ತಿ ಲೈನ್ ಸರಿಪಡಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಬಾಗಲಕೋಟೆ ನಡುರಸ್ತೆಯಲ್ಲಿ ಗೂಳಿಗಳ ಕಾದಾಟ – ವಾಹನಗಳು ಜಖಂ
ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಮೂಡಿಗೆರೆ | ಹೆಚ್ಚಿದ ಕಾಡಾನೆ ಉಪಟಳ – ಓಡಿಸಲು ಅನುಮತಿ ಇಲ್ಲ ಎಂದ ಅಧಿಕಾರಿಗಳು!