ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ನಾಡಿ ಮಿಡತವಾಗಿರೋ ಬಿಎಂಟಿಸಿ (BMTC) ಈಗ ಪರಿಸರ ಸ್ನೇಹಿಯಾಗ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಜನರ ಸೇವೆ ಮಾಡುತ್ತಿದೆ. ಈ ವರ್ಷದಾಂತ್ಯಕ್ಕೆ ಇನ್ನೂ 1000 ಸಾವಿರ ಇವಿ ಬಸ್ (EV Bus) ಗಳನ್ನ ರಸ್ತೆಗಳಿಸೋ ಪ್ಲಾನ್ ಮಾಡಿಕೊಂಡಿದೆ. ಅದರೇ ಪರಿಸರ ಸ್ನೇಹಿ ಬಸ್ ಸೇವೆಗೆ ಬಿಎಂಟಿಸಿ ಕಾರ್ಮಿಕರು ಮಾತ್ರ ಆತಂಕಗೊಂಡಿದ್ದಾರೆ..ಇದು ಸರ್ಕಾರದ ಹುನ್ನಾರ ಅಂತಾ ಶಾಪಿಸುತ್ತಿದ್ದಾರೆ.
Advertisement
ಹೌದು. ಸಿಲಿಕಾನ್ ಸಿಟಿ ಜನರ ಜೀವನಾಡಿ ನಮ್ಮ ಬಿಎಂಟಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‍ಗಳ ಕಡೆ ಮುಖ ಮಾಡಿದೆ. ಈಗಾಗಲೇ ಬಿಎಂಟಿಸಿಯಲ್ಲಿ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳು ಸಾರ್ವಜನಿಕರ ಸೇವೆ ಮಾಡುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಹೊಸದಾಗಿ 921 ಇವಿ ಬಸ್‍ಗಳನ್ನ ರಸ್ತೆಗೆ ಇಳಿಸುವ ಯೋಜನೆಯನ್ನ ಬಿಎಂಟಿಸಿ ಹೊಂದಿದೆ.
Advertisement
Advertisement
ಈ ಪರಿಸರ ಸ್ನೇಹಿ ಇವಿ ಬಸ್‍ಗಳಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗ್ತಿಲ್ಲ. ಆದರೆ ಇದರಿಂದ ನೌಕರರಿಗೆ ಆತಂಕ ಶುರುವಾಗಿದೆ. ಹೊಸ ಬಸ್ಗಳು ಬರ್ತಿವೆ. ಹಳೆಯ ಡಿಸೇಲ್ ಬಸ್‍ಗಳ ಗತಿಯೇನು ಅನ್ನೋ ಪ್ರಶ್ನೆ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 85 ಲಕ್ಷ ರೂಪಾಯಿ ಅನುದಾನವಾಗಿ ನೀಡಿ ಖಾಸಗೀಕರಣ ಮಾಡ್ತಿದ್ದಾರೆ. ಇವಿ ಬಸ್‍ನಿಂದ ನಿಗಮದ ನೌಕರರು ಬೀದಿ ಪಾಲ್ತಾರೆ ಅನ್ನೋ ಭಯ ಶುರುವಾಗಿದೆ. ಇದನ್ನೂ ಓದಿ: ಸಾರಿಗೆ ಇಲಾಖೆಯಿಂದ ಡೆಡ್‍ಲೈನ್- ಓಲಾ, ಉಬರ್ ಕಳ್ಳಾಟಕ್ಕೆ ಬೀಳುತ್ತಾ ಬ್ರೇಕ್?
Advertisement
ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಎಂಟಿಸಿಯನ್ನ ಖಾಸಗೀಕರಣ ಮಾಡಲು ಮುಂದಾಗಿದೆ. ಮುಂದೆ ನೌಕರರು ಬೀದಿಪಾಲಾಗ್ತಾರೆ. ಪರಿಸರ ಸ್ನೇಹಿ ಬಸ್‍ಗೆ ನಮ್ಮ ವಿರೋಧವಿಲ್ಲ, ಪರಿಸರ ಸ್ನೇಹಿ ಇವಿ ಬಸ್‍ಗೆ ನಮ್ಮ ನಿಗಮದ ಸಿಬ್ಬಂದಿಯನ್ನ ಬಳಸಿಕೊಳ್ಳೋ ಕೆಲಸವಾಗಬೇಕು. ಇಲ್ಲವಾದಲ್ಲಿ ಬಿಎಂಟಿಸಿ ಕಾರ್ಮಿಕರ ಬದುಕು ಅತಂತ್ರವಾಗಲಿದೆ ಅಂತಾ ಬಿಎಂಟಿಸಿ ಕಾರ್ಮಿಕರ ಮುಖಂಡ ಆತಂಕ ವ್ಯಕ್ತಪಡಿಸಿದ್ದಾರೆ.
ಇವಿ ಬಸ್ ಸೇವೆಗೆ ಯಾರ ವಿರೋಧವೂ ಇಲ್ಲ, ಆದರೆ ಖಾಸಗೀಕರಣದ ಮೂಲಕ ಬಿಎಂಟಿಸಿಯನ್ನ ಮುಗಿಗಿಸೋ ಕೆಲಸ ನಡೆಯುತ್ತಿದೆ. ಅದರಿಂದ ಸಿಬ್ಬಂದಿಗೆ ಆತಂಕ ಶುರುವಾಗಿದೆ.