ಬೆಂಗಳೂರು: ಬಿಎಂಟಿಸಿ ಸಂಸ್ಥೆಗೆ ನಷ್ಟದ ಮೇಲೆ ನಷ್ಟವಾಗುತ್ತಿದೆ. ಇದಕ್ಕೆ ಈಗ ವೋಲ್ವೋ ಬಸ್ಸುಗಳು ಸೇರ್ಪಡೆಯಾಗುತ್ತಿವೆ. ಪ್ರಯಾಣಿಕರ ಕೊರತೆಯಿಂದ ನಷ್ಟದ ಹಾದಿಯಲ್ಲಿದ್ದ ವೋಲ್ವೋ ಈಗ ಐಟಿ-ಬಿಟಿ ಕಂಪನಿಗಳಿಗೂ ಬೇಡವಾಗಿದೆ. ಉತ್ತರ ಕರ್ನಾಟಕಕ್ಕಾದ್ರೂ ಬಸ್ಸುಗಳ ಶಿಫ್ಟ್ ಮಾಡೋ ಸಾರಿಗೆ ಸಚಿವರ ಯೋಚನೆಗೂ ಬ್ರೇಕ್ ಬಿದ್ದಿದೆ.
Advertisement
ಕಳೆದ ಎರಡೂವರೆ ವರ್ಷದಿಂದ ನಿಂತಲ್ಲೇ ನಿಂತ ವೋಲ್ವೋ ಬಸ್ಸುಗಳಲ್ಲಿ 850 ಬಸ್ಸುಗಳ ಪೈಕಿ ಕೇವಲ 200 ಬಸ್ ಮಾತ್ರ ನಿತ್ಯ ಸಂಚಾರ ಮಾಡುತ್ತಿವೆ. ಉಳಿದವು ಡಿಪೋನಲ್ಲೇ ಧೂಳು ಹಿಡಿಯುತ್ತಿವೆ. ಈಗ ವೋಲ್ವೋ 650 ಬಸ್ಸುಗಳು ಸಾರಿಗೆ ಸಚಿವರಿಗೇ ಸವಾಲಾಗಿವೆ. ಈ ವೋಲ್ವೋ ಬಸ್‌ಗಳನ್ನ ಉತ್ತರ ಕರ್ನಾಟಕ್ಕೆ ಹಸ್ತಾಂತರಿಸೋ ಯೋಜನೆಯೂ ಸಾರಿಗೆ ಇಲಾಖೆಗೆ ಇತ್ತು. ಆದರೆ ಈಗ ಅದೂ ಸಹ ವಿಫಲವಾಗಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ
Advertisement
Advertisement
ಏಕೆಂದರೆ ರೋಡ್ ಕ್ಲಿಯರೆನ್ಸ್ ಕಡಿಮೆ ಇರೋ ಕಾರಣ ಉತ್ತರ ಕರ್ನಾಟಕಕ್ಕೆ ಈ ಬಸ್ಸುಗಳು ಹೊಂದಿಕೆಯಾಗ್ತಿಲ್ಲ. ಇತ್ತ ಬೆಂಗಳೂರಿನಲ್ಲೂ ಈ ಬಸ್ಸುಗಳ ಸಂಚಾರ ಸಾಧ್ಯವಾಗ್ತಿಲ್ಲ. ವೋಲ್ವೋ ಬಸ್ಸುಗಳು ಇದ್ದೂ ಇಲ್ಲದಂತಾಗಿವೆ. ವೋಲ್ವೋಗೆ ಜನರ ಡಿಮ್ಯಾಂಡ್ ತುಂಬಾ ಕಡಿಮೆಯಾಗಿದೆ. ಏರ್‌ಪೋರ್ಟ್ ರಸ್ತೆಯನ್ನ ಹೊರತುಪಡಿಸಿದ್ರೇ ಉಳಿದ ಕಡೆ ವೋಲ್ವೋ ನೋಡುವುದೇ ಅಪರೂಪವಾಗಿದೆ. ಹೀಗಾಗಿ ಶೀಘ್ರದಲ್ಲಿ ಎಲ್ಲಾ 650 ವೋಲ್ವೋಗಳು ಗುಜರಿ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ
Advertisement
ಇತ್ತ 2ನೇ ಹಂತದಲ್ಲಿ ರಸ್ತೆಗಿಳಿಯುತ್ತಿರೋ 300 ಎಲೆಕ್ಟ್ರಿಕ್ ಬಸ್‌ಗಳು ಸಹ ವೋಲ್ವೋ ಬಸ್ಸುಗಳನ್ನ ಮೂಲೆಗುಂಪು ಮಾಡೋದು ಗ್ಯಾರೆಂಟಿ ಎನ್ನುವಂತಾಗಿದೆ. ಈ ಹಿಂದೆ ಐಟಿಬಿಟಿ ಕಂಪನಿಗಳಿಂದ ಬೇಡಿಕೆ ಬಂದ್ರೆ ಸಾರಿಗೆ ಇಲಾಖೆಯಿಂದ ವೋಲ್ವೋ ಬಸ್ ನೀಡಲಾಗ್ತಿತ್ತು. ಆದರೆ ಕೊರೊನಾ ನಂತರ ಬಸ್ಸುಗಳನ್ನ ಕೇಳುವವರೇ ಇಲ್ಲದಂತಾಗಿತ್ತು. ಈಗ ಐಟಿಬಿಟಿ ಕಂಪನಿಗಳು ವೋಲ್ವೋ ಬಸ್ ಬೇಡ ಎಲೆಕ್ಟ್ರಿಕ್ ಬಸ್ ಬೇಕು ಎನ್ನುತ್ತಿವೆ. ಈ ಹಿನ್ನಲೆ ಸದ್ಯ ಡಿಪೋದಲ್ಲಿ ನಿಂತಿರೋ 650 ವೋಲ್ವೋ ಬಸ್ಸುಗಳು ಸ್ಕ್ರಾಪ್ ಆಗೋ ಸಾಧ್ಯತೆ ಹೆಚ್ಚಾಗುತ್ತಿದೆ.
ಒಂದು ಕಡೆ ಸಚಿವರ ಉತ್ತರ ಕರ್ನಾಟಕ ವೋಲ್ವೋ ಬಸ್ ಶಿಫ್ಟ್ ಪ್ಲ್ಯಾನ್ ಆಗಿದೆ. ಹೀಗಾಗಿ ಸಾರಿಗೆ ಇಲಾಖೆಗೆ ತಲೆ ನೋವಾದ ಬಿಎಂಟಿಸಿಯ ನೂರಾರು ವೋಲ್ವೋ ಬಸ್ಸುಗಳು. ರೋಡಿಗಿಳಿಸಿದ್ರೆ ಪ್ರಯಾಣಿಕರು ಬರ್ತಿಲ್ಲ, ನಿಲ್ಲಿಸಿದ್ರೆ ಕೋಟ್ಯಾಂತರ ರೂಪಾಯಿ ವೆಚ್ಚ. ಬಳಕೆಯಾಗದೇ ಸ್ಕ್ರಾಪ್ ಆಗಿಬಿಡುತ್ತಾ ಎನ್ನುವ ಚಿಂತೆ ಶುರುವಾಗಿದೆ.