ರಾಮನಗರ: ಬುಧವಾರ ತೋಟದ ಮನೆಯ ಹೊಸತೊಡಕು ಊಟಕ್ಕೆ ಚುನಾವಣಾಧಿಕಾರಿಗಳು (Returning Officer) ಬ್ರೇಕ್ ಹಾಕಿದ ವಿಚಾರದ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಯುಗಾದಿ (Ugadi) ಹಬ್ಬದಲ್ಲಿ ಹೊಸತೊಡಕು ಊಟ ಹಾಕುತ್ತೇವೆ. ನಮ್ಮ ತೋಟದ ಮನೆಯ 100 ರಿಂದ 150 ಮಂದಿ ಕೆಲಸಗಾರರಿಗೆ ಊಟದ ವ್ಯವಸ್ಥೆ ಮಾಡಿದ್ದೆವು. ಅಲ್ಲದೇ ಬಿಜೆಪಿ-ಜೆಡಿಎಸ್ ಮುಖಂಡರು ಸಹ ಊಟಕ್ಕೆ ಸೇರುವ ತೀರ್ಮಾನ ಮಾಡಿದ್ದೆವು. ಇಲ್ಲಿ ಯಾವುದೇ ಪಾರ್ಟಿ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಸಾರ್ವಜನಿಕ ಸಮಾರಂಭ ಮಾಡುತ್ತಿರಲಿಲ್ಲ. ಕಾಂಗ್ರೆಸ್‌ನವರ ರೀತಿಯ ಕುಕ್ಕರ್, ಸೀರೆ ಹಂಚುವ ಕಾರ್ಯಕ್ರಮ ನಮ್ಮದಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಹೆಚ್‌ಡಿಕೆ ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ರು: ಸಚಿವ ಚಲುವರಾಯಸ್ವಾಮಿ
Advertisement
Advertisement
ಕಾಂಗ್ರೆಸ್ (Congress) ಸೋಲುವ ಆತಂಕದಲ್ಲಿ ಏನೇನೋ ಆರೋಪ ಮಾಡುತ್ತಿದೆ. ಅವರ ದೂರಿಗೆ ಮಣೆಹಾಕಿ ಅಧಿಕಾರಿಗಳು ತೋಟದ ಮನೆಗೆ ಬಂದು ಪರಿಶೀಲನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಕುಕ್ಕರ್, ಸೀರೆ ಹಂಚುವ ಬಗ್ಗೆ ಯಾಕೆ ಚುನಾವಣಾ ಆಯೋಗ ಕ್ರಮವಹಿಸುತ್ತಿಲ್ಲ. ಚುನಾವಣಾಧಿಕಾರಿಗಳು ಅವರ ಕೈಗೊಂಬೆ ಆಗಿರೋದು ಸ್ಪಷ್ಟವಾಗಿದೆ. ರಾಮನಗರದಲ್ಲಿ ಸುಮಾರು 3,700 ಸೀರೆ ಜಪ್ತಿ ಮಾಡಿದ್ದು ನಮ್ಮ ಕಾರ್ಯಕರ್ತರು. ಆಗ ಚುನಾವಣಾ ಆಯೋಗ, ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಚುನಾವಣಾಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಎಲ್ಲಾ ಸೇರಿ ಮತದಾನದ ಹಬ್ಬ ಆಚರಿಸೋಣ: ತುಷಾರ್ ಗಿರಿನಾಥ್
Advertisement
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರು ಉತ್ಸಾಹದಿಂದ ಡಾ.ಮಂಜುನಾಥ್ (Dr Manjunath) ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ವೈದ್ಯಕೀಯ ಸೇವೆಯನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತಾರೆ. ಸಿ.ಎನ್.ಮಂಜುನಾಥ್ ಅವರು ಈ ಭಾಗದಲ್ಲಿ ಸಂಸದರಾದರೆ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರೆ. ಹಾಗಾಗಿ ಜನ ಅವರನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಸ್ವಾಮೀಜಿ ಕಾರ್ಯಕ್ರಮಕ್ಕೆ ಹೆಚ್‍ಡಿಕೆ ಹೋಗಿ ಬರೋದ್ರೊಳಗೆ ಆಪರೇಷನ್ ಮುಗಿದು ಹೋಗಿತ್ತು: ಡಿಕೆಶಿ
Advertisement
ಮಂಡ್ಯದಲ್ಲಿ ತಂದೆ ಪರ ಪ್ರಚಾರ ಮಾಡುವ ವಿಚಾರ ಕುರಿತು ಮಾತನಾಡಿ, ಮಂಡ್ಯದ 8 ವಿಧಾನಸಭಾ ಕ್ಷೇತ್ರಗಳಿಗೂ ಒಂದೊಂದು ದಿನ ಮೀಸಲಿಟ್ಟಿದ್ದೇನೆ. ಅಲ್ಲಿಯೂ ಎಲ್ಲಾ ಕಡೆ ಓಡಾಟ ಮಾಡುತ್ತೇನೆ. ಅಲ್ಲಿ ಪಕ್ಷದ ಕಾರ್ಯಕರ್ತರು ಬಲಿಷ್ಠವಾಗಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ಹೆಚ್‌ಡಿಡಿ ಅವರು ರಾಜ್ಯದ 28 ಕ್ಷೇತ್ರದಲ್ಲೂ ಪ್ರಚಾರ ಮಾಡುವ ಹುಮ್ಮಸ್ಸು ತೋರುತ್ತಿದ್ದಾರೆ. ಶೀಘ್ರದಲ್ಲೇ ಎಲ್ಲಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಎರಡು ಬಾರಿ ಸಂಸತ್‌ಗೆ ಹೋಗಲು ಯತ್ನಿಸಿ ವಿಫಲರಾದ ಸಿದ್ದರಾಮಯ್ಯ!