ಹಾಸನ: ಐಎನ್‌ಡಿಐಎ (INDIA) ಸದಸ್ಯರು ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಚುನಾವಣೆಗೆ ಇನ್ನೂ 7-8 ತಿಂಗಳು ಸಮಯವಿದೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Deve Gowda) ಅಸಮಾಧಾನ ಹೊರಹಾಕಿದ್ದಾರೆ.
ಅವಧಿ ಪೂರ್ವ ಲೋಕಸಭಾ ಚುನಾವಣೆ (Lok Sabha Election) ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ವಿಚಾರವಾಗಿ ಐಎನ್‌ಡಿಐಎ ಮೈತ್ರಿ ಕೂಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೆಚ್‌ಡಿಡಿ, ಮುಂಬೈಯಲ್ಲಿ 28 ಗುಂಪಿನ ಒಂದು ದೊಡ್ಡ ಮಹಾಸಭೆ ನಡೆಯಿತು. ಆಗಸ್ಟ್ 30 ರೊಳಗೆ ಎಲ್ಲಾ ಸೀಟ್ ನಿಗದಿ ಮಾಡುತ್ತೇವೆ ಎಂದು ಹೇಳಿದರು, ಏನಾಯ್ತು? ಒಂದು ಕಮಿಟಿ ಮಾಡಿದ್ದಾರೆ. ಅದರ ಲೀಡರ್ ಯಾರು? ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೇಳಿದ್ದಾರಾ? ಅಥವಾ ಒಕ್ಕೂಟದ ಸಂಚಾಲಕರು ಯಾರೆಂದು ಹೇಳಿದ್ದಾರಾ ಎಂದು ಪ್ರಶ್ನಿಸಿದರು.
Advertisement
Advertisement
ಒಂದು ಕಮಿಟಿ ಮಾಡಿದ್ದಾರೆ, ಆ ಕಮಿಟಿಯವರು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಬೇಕು. 2 ದಿನ ಮುಂಬೈನಲ್ಲಿ ಮೀಟಿಂಗ್ ನಡೆಯಿತು. ಚುನಾವಣೆಗೆ ಇನ್ನೂ 7-8 ತಿಂಗಳು ಇದೆ. ನೋಡೋಣ ಬನ್ನಿ ನಾನು ಬದುಕಿದ್ದೇನೆ ಎಂದು ನುಡಿದರು.
Advertisement
ಕಾವೇರಿ ನೀರಿನ ವಿವಾದದ ಬಗ್ಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಷಯದಲ್ಲಿ ನಾನು ನಿಮ್ಮ ಮುಂದೆ ಏನು ಹೇಳಲು ಶಕ್ತಿಯಿಲ್ಲ. ಕುಮಾರಸ್ವಾಮಿ ಸಿದ್ದರಾಮಯ್ಯ ಅವರು ಕರೆದ ಸಭೆಯಲ್ಲಿ ಮಾತನಾಡಿದ್ದಾರೆ. ಅದರ ಸಾರಾಂಶವನ್ನು ಎಲ್ಲಾ ಹೇಳಿದ್ದಾರೆ. ಒಂದು ಕಡೆ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನ ಕೊಡಲಿಲ್ಲ. ಇನ್ನೊಂದು ಕಡೆ ಪ್ರಾಧಿಕಾರವು ತೀರ್ಮಾನ ಮಾಡಿಲ್ಲ. ಈ ಹಂತದಲ್ಲಿ ಮಂಡ್ಯದಲ್ಲಿ ಹೋರಾಟ ನಡೆಯುತ್ತಿದೆ. ನಾನು ಹೇಳಬೇಕಿರುವುದು ನನ್ನ ಜವಾಬ್ದಾರಿ. ನಾನು ಮಾತನಾಡುವ ಟೈಂ ಇನ್ನು ಬರಬೇಕು. ಟೈಂ ಬಂದಾಗ ನಾನು ಮಾತನಾಡುತ್ತೇನೆ. ಪ್ರಧಾನಮಂತ್ರಿಗಳ ಬಳಿ ನಾನೇ ಹೋಗಬೇಕು ಎನ್ನುವ ಸನ್ನಿವೇಶ ಬಂದಾಗ ನಾನೇ ಹೋಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: 5 ಬಾರಿ ಮರುಜನ್ಮ ಪಡೆದಿದ್ದೇನೆ, ನನ್ನ ಜೀವನದ ಬಗ್ಗೆ ಕನಿಕರದಿಂದ ನೋಡಿ: ಹೆಚ್‌ಡಿಕೆ ರಿಯಾಕ್ಷನ್
Advertisement
ತವರು ಜಿಲ್ಲೆಯಲ್ಲಿ ಟೆಂಪಲ್ ರನ್ ಮುಂದುವರಿಸಿದ ಮಾಜಿ ಪ್ರಧಾನಿ ಭಾನುವಾರ ಬೆಳಗ್ಗೆ ಪತ್ನಿ ಚೆನ್ನಮ್ಮ ಜೊತೆ ಹುಟ್ಟೂರು ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ನಂತರ ಹಾಸನ ತಾಲೂಕಿನ ಬೈಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಲಕ್ಷ್ಮಿ ಜನಾರ್ದನಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವೇಗೌಡ ದಂಪತಿಗೆ ಶಾಸಕ ಹೆಚ್‌ಪಿ ಸ್ವರೂಪ್ ಪ್ರಕಾಶ್ ಕೂಡಾ ಸಾಥ್ ನೀಡಿದ್ದಾರೆ.
ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನ ಅಸಿಂಧು ಎಂದು ತೀರ್ಪು ಬಂದ ದಿನದಿಂದ ಮಾಜಿ ಪ್ರಧಾನಿ ತವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ತಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದಾರೆ. ದೊಡ್ಡಗೌಡರು 46 ಜನ ಕುಟುಂಬ ಸದಸ್ಯರ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದಾರೆ. ಪೂಜೆಗೂ ಮುನ್ನ ಅರ್ಚನೆಗಾಗಿ 46 ಜನರ ಹೆಸರಿನ ಪಟ್ಟಿ ಕೊಟ್ಟಿದ್ದಾರೆ. ಕೆಲವರ ಹೆಸರನ್ನು ತಾವೇ ಖುದ್ದು ಹೇಳಿ ಬಳಿಕ ಎಲ್ಲರ ಪಟ್ಟಿ ಕೊಟ್ಟಿದ್ದಾರೆ. ಕುಟುಂಬ ಸದಸ್ಯರ ಶ್ರೇಯಸ್ಸಿಗಾಗಿ ವಿಶೇಷ ಪೂಜೆ ನಡೆಸಿದ್ದಾರೆ. ಇದನ್ನೂ ಓದಿ: ಆರೋಗ್ಯದಲ್ಲಿ ಏರುಪೇರು – ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
Web Stories