ಬೆಂಗಳೂರು: ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮೋದಿ ಬರುತ್ತಿರೋ ಹಿಂದಿನ ಉದ್ದೇಶವೇ ಎಲೆಕ್ಷನ್ ಎನ್ನಲಾಗುತ್ತಿದೆ. ಈ ಮೂಲಕ ಯಡಿಯೂರಪ್ಪ (BS Yediyurappa) ಗೆ ಬಹುಪರಾಕ್ ಹೇಳೋ ಮೂಲಕ ಲಿಂಗಾಯತ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳೋಕೆ ಯತ್ನಿಸುತ್ತಿದ್ದಾರೆ.
Advertisement
ಯಡಿಯೂರಪ್ಪ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಮೋದಿ (Narendra Modi) ಆಸಕ್ತಿ ವಹಿಸ್ತಿರೋದು ಇದೇ ಕಾರಣಕ್ಕೆ. ಪಂಚಮಸಾಲಿ ಮೀಸಲಾತಿ ಅಸಮಾಧಾನ, ನಾಯಕತ್ವದಿಂದ ಕೆಳಗಿಳಿಸಿದ್ದ ನೋವಿಗೆ ಮೋದಿ ಮುಲಾಮು ಹಚ್ಚುತ್ತಿದ್ದಾರೆ ಎನ್ನಲಾಗ್ತಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಪ್ರತ್ಯೇಕ ಲಿಂಗಾಯತ ಧರ್ಮ ದೊಡ್ಡ ಹೊಡೆತ ಕೊಟ್ಟಿತ್ತು. ಇದನ್ನೂ ಓದಿ: ರಾಜ್ಯ ಆಳ್ತೀನಿ ಎಂಬ ಭಯದಿಂದ ನನ್ನನ್ನ ಮುಗಿಸಲು ಹೊರಟಿದ್ರು – ರೆಡ್ಡಿ
Advertisement
Advertisement
ಸಿದ್ದರಾಮಯ್ಯ ಊಹಿಸದಷ್ಟು ಫಲಿತಾಂಶದಲ್ಲಿ ಕಾಂಗ್ರೆಸ್ (Congress) ಗೆ ಪೆಟ್ಟು ಕೊಟ್ಟಿತ್ತು. ಆದರೆ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಪಂಚಮಸಾಲಿ ಲಿಂಗಾಯತ ಮೀಸಲಾತಿ ಬಿಜೆಪಿ ತಲೆನೋವು ತಂದಿಟ್ಟಿದೆ. ಅಷ್ಟೇ ಅಲ್ಲ ಯಡಿಯೂರಪ್ಪ ನಾಯಕತ್ವ ಇಲ್ಲದೇ ಬಿಜೆಪಿ ಸರ್ಕಾರ ಚುನಾವಣೆ ಎದುರಿಸುತ್ತಿದೆ. ಹಾಗಾಗಿ ಪಂಚಮಸಾಲಿ ಮೀಸಲಾತಿ ವಿಚಾರ, ಯಡಿಯೂರಪ್ಪ ನೇರ ಅನುಪಸ್ಥಿತಿ ಬಗ್ಗೆ ಆತಂಕ ಎದುರಾಗಿದೆ.
Advertisement
ಈ ಎರಡು ವಿಚಾರದಲ್ಲಿ ಲಿಂಗಾಯತ ವೋಟ್ ಬ್ಯಾಂಕ್ ಹೇಗೆ ರಿಯಾಕ್ಟ್ ಮಾಡುತ್ತೆ ಎಂಬ ಆತಂಕದಿಂದ ಹೈಕಮಾಂಡ್ ಈ ಪ್ಲಾನ್ ಮಾಡಿಕೊಂಡಿದೆ. ಆ ಕಾರಣಕ್ಕಾಗಿಯೇ ಹೈಕಮಾಂಡ್ ಪದೇ ಪದೇ ಯಡಿಯೂರಪ್ಪ ಜಪ ಮಾಡುತ್ತಿದೆ. ಲಿಂಗಾಯತ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯಿಂದಲೂ ಮುಲಾಮು ಹಚ್ಚುವ ಗೇಮ್ ಮಾಡ್ತಿದ್ದಾರೆ. ಹಾಗಾದ್ರೆ ಒಂದೇ ಏಟಿಗೆ ಎರಡು ವಿಚಾರಗಳನ್ನ ಹೊಡೆದು ಹಾಕ್ತಾರಾ ಮೋದಿ..? ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.