ಮಡಿಕೇರಿ: ಬಿಜೆಪಿ (BJP) ಪಕ್ಷದ ಚಿಹ್ನೆ ಬಳಸಿ ಎಸ್‍ಎಸ್‍ಎಲ್‍ಸಿ (SSLC) ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ್ದ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ (K.G.Bopaiah) ಅವರಿಗೆ ಚುನಾವಣಾ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷೆ ಅಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ ಬೋಪಯ್ಯ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪಕ್ಷದ ಚಿಹ್ನೆ ಬಳಸಿ ಮಕ್ಕಳಿಗೆ ಶುಭಾಶಯ ಕೋರಿದ್ದರು. ಚುನಾವಣಾ ಅಧಿಕಾರಿಗಳ ಒಪ್ಪಿಗೆ ಪಡೆಯದೆ ಸಾಮಾಜಿಕ ಜಾಲತಾಣದಲ್ಲಿ ಶಾಸಕರು ಪೋಸ್ಟ್ ಮಾಡಿದ್ದರು. ಈ ಬಗ್ಗೆ 24 ಗಂಟೆಯೊಳಗೆ ಉತ್ತರಿಸುವಂತೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಸೋಲು ಕಾಣದ ಕಾಗೇರಿ ಕ್ಷೇತ್ರದಲ್ಲಿ ಚುನಾವಣೆ ಹವಾ ಹೇಗಿದೆ? – 2 ಪ್ರಬಲ ಜನಾಂಗದ ನಾಯಕರು ಮತ್ತೆ ಕಾಳಗಕ್ಕೆ ಇಳಿತಾರಾ?
Advertisement
Advertisement
ಮತ್ತೋರ್ವ ಸಚಿನ್ ಚೆರಿಯಪಂಡ ಎಂಬವರಿಗೂ ಚುನಾವಣಾ ಆಯೋಗ (Election Commission) ನೋಟಿಸ್ ಜಾರಿ ಮಾಡಿದೆ. ಶುಕ್ರವಾರ ಜನರಲ್ ತಿಮ್ಮಯ್ಯ ಜನ್ಮದಿನ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಚಿನ್ಹೆ ಬಳಸಿ ಶುಭಾಶಯ ಕೋರಿದ್ದರು. ಇಬ್ಬರಿಗೂ ಕಾರಣ ಕೇಳಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನ ಸಿಬ್ಬಂದಿಯ ಜೊತೆ ಅನುಚಿತ ವರ್ತನೆ- ಸ್ವೀಡಿಷ್ ಪ್ರಜೆಯ ಬಂಧನ