– ರವೀಶ್ ಎಚ್.ಎಸ್
ಬೆಂಗಳೂರು: ಜನವರಿಯಲ್ಲಿ ರಾಜ್ಯ ಬಿಜೆಪಿಗರಿಗೆ ಎಲೆಕ್ಷನ್ ಟಾಸ್ಕ್ ವರಿ ಶುರುವಾಗಿದೆ. ಬಿಜೆಪಿಯಲ್ಲಿ(BJP) ತ್ರಿಮೂರ್ತಿ ಚಕ್ರವ್ಯೂಹ ರಚನೆ ಆಗುತ್ತಿದ್ದು ಸ್ವತಃ ಅಮಿತ್ ಶಾ(Amit Shah) ಅವರೇ ಟಾಸ್ಕ್ ಟೆಸ್ಟ್ ಮಾಡುತ್ತಿದ್ದಾರೆ.
ನಡ್ಡಾ, ಮೋದಿ, ಶಾ ಹವಾ ಸೃಷ್ಟಿಗೆ ಪ್ಲ್ಯಾನ್ ಆಗಿದ್ದು, ಬಿಜೆಪಿಯಲ್ಲಿ ಒಳ ತಂತ್ರದ ಗೇಮ್ ಬಿರುಸುಗೊಂಡಿದೆ. ಜನವರಿ 5, 6 ಎರಡು ದಿನಗಳ ಕಾಲ ಜೆ.ಪಿ.ನಡ್ಡಾ(JP Nadda) ಎಲೆಕ್ಷನ್ ಟಾಸ್ಕ್ ಕೊಡಲು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
Advertisement
Advertisement
ಅಷ್ಟೇ ಅಲ್ಲ ಮೂರು ಜಿಲ್ಲೆಗಳಲ್ಲಿ ವಿವಿಧ ಮಠಗಳಿಗೆ ಭೇಟಿ ಕೊಡುವ ನಡ್ಡಾ ವಿವಿಧ ಸಮುದಾಯಗಳ ಮೇಲೂ ಕಣ್ಣಿಟ್ಟಿದ್ದಾರೆ. ಜನವರಿ 12ರಂದು ಯುವ ಜನೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ(Hubballi) ನಡೆಯಲಿರುವ ಯುವಜನೋತ್ಸವದಲ್ಲಿ ಪ್ರಧಾನಿಯಿಂದ ಮೆಗಾ ಭಾಷಣ ಇರಲಿದ್ದು, ಯುವಕರನ್ನು ಸೆಳೆಯಲು ಸಹಕಾರಿ ಆಗಲಿದೆ ಎಂದು ರಾಜ್ಯ ಬಿಜೆಪಿ ನಂಬಿ ಕುಳಿತಿದೆ. ಇದನ್ನೂ ಓದಿ: ಗುರುವಾರ ದಶಪಥ ಹೆದ್ದಾರಿ ಪರಿಶೀಲನೆ ನಡೆಸಲಿದ್ದಾರೆ ಗಡ್ಕರಿ – ಬಿಜೆಪಿ ನಾಯಕರ ನಡುವೆ ನಾಮಕರಣ ಜಟಾಪಟಿ
Advertisement
ಈ ನಡುವೆ ಸಂಕ್ರಾಂತಿ ಬಳಿಕ ಮತ್ತೆ ಅಮಿತ್ ಶಾ 2 ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಜನವರಿ 2 ರಿಂದ ಆರಂಭವಾಗಿರುವ ಬೂತ್ ಅಭಿಯಾನ ಜನವರಿ 12ಕ್ಕೆ ಅಂತ್ಯಗೊಳ್ಳಲಿದೆ. ಅಲ್ಲದೆ ಸಂಕ್ರಾಂತಿ ಬಳಿಕ ವಿಜಯಸಂಕಲ್ಪ ಯಾತ್ರೆ ಆರಂಭವಾಗಿ ಜನವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ.
Advertisement
ಬೂತ್ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಅಮಿತ್ ಶಾ ವಿಜಯಸಂಕಲ್ಪ ಯಾತ್ರೆಯಲ್ಲೂ ಭಾಗವಹಿಸಲು ಪ್ಲ್ಯಾನ್ ಮಾಡಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಆಪರೇಷನ್ ಓಲ್ಡ್ ಮೈಸೂರು ಟಾಸ್ಕ್ ಕೊಟ್ಟಿರುವ ಅಮಿತ್ ಶಾಗೆ ರಾಜ್ಯ ಬಿಜೆಪಿ ನಾಯಕರು ಪ್ರಗತಿ ರಿಪೋರ್ಟ್ ಕೊಡಬೇಕಿದೆ.
ಟಾಸ್ಕ್ ರಿಪೋರ್ಟ್ ಕೊಡುವುದರ ಜೊತೆ ಎಷ್ಟು ಅನುಷ್ಠಾನ ಎಂಬುದರ ಬಗ್ಗೆ ರಾಜ್ಯ ನಾಯಕರು ವರದಿ ಕೊಡಬೇಕು. ಒಟ್ಟಾರೆಯಾಗಿ ಜನವರಿಯಲ್ಲಿ ಬಿಜೆಪಿ ಎಲೆಕ್ಷನ್ ವಾರ್ಮ್‌ಅಪ್ ಬಳಿಕ ಫೆಬ್ರವರಿ ಮೊದಲ ವಾರದಿಂದ ಬಿಜೆಪಿಯ ಎಲೆಕ್ಷನ್ ಅಸಲಿ ಆಟ ಶುರು ಮಾಡಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k