ಚಿಕ್ಕಮಗಳೂರು: ಮತದಾನ ಮುಗಿದ ಬಳಿಕ ಇವಿಎಂ (EVM) ಹಾಗೂ ವಿವಿ ಪ್ಯಾಟ್ (VVPAT) ಯಂತ್ರಗಳನ್ನು ಅಧಿಕಾರಿಗಳು ಮತಗಟ್ಟೆಯಲ್ಲೇ ಬಿಟ್ಟು ಹೋದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
Advertisement
ನಗರದ ಪೆನ್ಷನ್ ಮೊಹಲ್ಲದ ಕಾಲೇಜಿನ ಮತಗಟ್ಟೆ ಸಂಖ್ಯೆ 168 ಹಾಗೂ 169 ರಲ್ಲಿ ಇರಿಸಲಾಗಿದ್ದ ಒಂದು ಇವಿಎಂ ಮಾತ್ರ ತೆಗೆದುಕೊಂಡು ಹೋಗಿದ್ದರು. ಬಳಿಕ ರಾಜಕೀಯ ಪಕ್ಷಗಳ ಏಜೆಂಟರ (Election Agents) ಕಣ್ಣಿಗೆ ಯಂತ್ರಗಳು ಕಾಣಿಸಿವೆ. ಅಧಿಕಾರಿಗಳನ್ನು ವಾಪಸ್ ಕರೆಸಿ ಪೊಲೀಸ್ ಭದ್ರತೆಯಲ್ಲಿ ಮತಯಂತ್ರವನ್ನು ಸಾಗಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ: ಕಿಡ್ನಿ ಸಮಸ್ಯೆ – ಸಿ.ಟಿ ರವಿ ಆಸ್ಪತ್ರೆಗೆ ದಾಖಲು
Advertisement
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೆನ್ಷನ್ ಮೊಹಲ್ಲಾ ಬೂತ್ ನಲ್ಲಿ 700 ಮತಗಳಿವೆ. ಮತ ಎಣಿಕೆಯ ದಿನ ಲೆಕ್ಕ ಸರಿಯಾಗಿ ಇರಬೇಕೆಂದು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ಸಮೀಕ್ಷೆಗಳು ಏನೇ ಹೇಳಲಿ, 115 ಸ್ಥಾನ ಪಡೆದು ಸರ್ಕಾರ ರಚಿಸುತ್ತೇವೆ : ಬಿಎಸ್‌ವೈ